ಚಳಿಗೆ ಮರದ ಎಲೆಗಳು ಬಾಡಿ ಹೇಗೆ ಉದುರಿ ಬೀಳುತ್ತದೆಯೋ ಹಾಗೆಯೇ ಆಸ್ತಿ ಸಂಪತ್ತಿನ ಆಸೆಗೆ ಇಂದು ನಮ್ಮ ಪೂರ್ವಜರಿಂದ ಬಂದ ಸುಂದರ ಸಂಸ್ಕೃತಿಗಳು ಕಣ್ಮರೆಯಾಗುತ್ತಿದೆ….
ಅಂದಿನ ಮುಂಜಾನೆಯ ವಾತಾವರಣ, ಪರಿಸರದ ಅಹವಾಲುಗಳು ಮನಸ್ಸಿಗೆ ಮುದ ನೀಡುತ್ತಿದ್ದವು. ಅಂದಿನ ಜನರು ಪರಸ್ಪರ ಭೇಟಿಯಾದಾಗ ಒಂದು ಮುಗುಳ್ನಗೆಯಾದರೂ ಇತ್ತು ಆದರೆ ಇಂದು ಅದೆಲ್ಲ ಬಹಳ ವಿರಳ.
ಸ್ವಂತ ಸಹೋದರ ಸಹೋದರಿಯರೊಂದಿಗೆ ಇರಬೇಕಾದ ಸ್ನೇಹ ಉತ್ತಮ ಸಹಬಾಳ್ವಿಕೆ ಇಂದು ಅನ್ಯರಾದ ಕೆಲ ಆಸ್ತಿ ಪಾಸ್ತಿಯ ಮಾಲಕರೊಂದಿಗೆ ಬೆರೆತುಕೊಂಡಿದೆ. ಇದೆಲ್ಲವೂ ಮನುಷ್ಯರು ಎಷ್ಟರ ಮಟ್ಟಿಗೆ ದುಡ್ಡನ್ನು ದೊಡ್ಡಪ್ಪನಾಗಿ ಕಾಣುತ್ತಾರೆ ಎಂದು ತಿಳಿಯುತ್ತದೆಯಲ್ಲವೇ…
ಹೌದು ಅಲ್ಲಾಹನ ರಸೂಲ್ ಕುಟುಂಬ ಸಂದರ್ಶನಕ್ಕೆ ಮತ್ತು ಕುಟುಂಬವನ್ನು ಬಲ ಪಡಿಸುವಲ್ಲಿ ಹೆಚ್ಚಿನ ಮಹತ್ವವನ್ನು ಕಲ್ಪಿಸಿದ್ದಾರೆ.
ಮಾತ್ರವಲ್ಲ ಯಾರಾದರು ಕುಟುಂಬವನ್ನು ಬೇರ್ಪಡಿಸಿದ್ದಲ್ಲಿ ಅವನು ನಮ್ಮವರಲ್ಲಿ ಕೂಡಿದವನಲ್ಲ ಎಂದೂ ಹೇಳಿದ್ದಾರೆ. ಹೀಗಿರುವಾಗ ಸಣ್ಣ ಪುಟ್ಟ ವಿಷಯಗಳಿಗೆ ಕುಟುಂಬದ ಸಂಬಂಧವನ್ನು ಮುರಿಯುವವರು ಪ್ರತ್ಯೇಕವಾಗಿ ಕೌಟುಂಬಿಕ ಬೆಸುಗೆಗೆ ಇರುವ ಮಹತ್ವವನ್ನು ಅರಿತುಕೊಳ್ಳಬೇಕು…..
وعن أَبي شُريْحٍ الخُزاعيِّ : أَنَّ النَّبيَّ ﷺ قَالَ: مَنْ كَانَ يُؤمِنُ بِاللَّهِ والْيَوْمِ الآخِرِ فَلْيُحْسِنْ
إلى جارِهِ، ومَنْ كَانَ يُؤْمِنُ بِاللَّهِ واليومِ الآخِرِ فَلْيُكْرِمْ ضَيْفَهُ،
ومَنْ كانَ يُؤمنُ باللَّهِ واليومِ الآخرِ فَلْيَقُلْ خَيْرًا أَوْ لِيَسْكُتْ
ಮೇಲೆ ಕಾಣುವ ಈ ಹದೀಸನ್ನು ಅರ್ಥ ಮಾಡಿಕೊಂಡರೆ ನಾವು ಅತಿಥಿ ಸತ್ಕಾರದ ಕುರಿತು ತಿಳಿಯಬಹುದು. ಅಲ್ಲಾಹನ ಪ್ರವಾದಿಯರು ಹೇಳುವರು “ಯಾರಾದರು ಅಲ್ಲಾಹನನ್ನು ಮತ್ತು ಅಂತ್ಯ ದಿನವನ್ನು ವಿಶ್ವಸಿಸುತ್ತಾರೋ ಅವರು ಅವರ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಲಿ“….
ಹೀಗೆ ಕುಟುಂಬದವರ ಭೇಟಿ, ಅತಿಥಿ ಸತ್ಕಾರ ಮುಂತಾದ ಸದ್ಗುಣಗಳನ್ನು ಬೆಳೆಸಿ ಉತ್ತಮ ಅಲ್ಲಾಹನ ಗುಲಾಮರಲ್ಲಿ ಸೇರೋಣ. ಅಳಿವಿನಂಚಿನಲ್ಲಿರುವ ಇಂತಹ ಗುಣಗಳನ್ನು ಅಳಿಯದಿರಲು ಶ್ರಮಿಸೋಣ…
ಅಲ್ಲಾಹನು ಅನುಗ್ರಹಿಸಲಿ ಆಮೀನ್.
— Author —