ಮಹಿಳೆಯರಿಗೆ ನೀಡಬೇಕಾದ
ಗೌರವವನ್ನು ನೀಡದೆ, ಅವರ ಸ್ವಾತಂತ್ರ್ಯವನ್ನು
ಕಸಿದು ಆಕೆಯನ್ನು ಶೋಷಿಸುವ ಕುತಂತ್ರಗಳು ಪುರಾತನ ಕಾಲದಿಂದಲೇ ಕಂಡು ಬಂದಿದೆ. ಸ್ವಾತಂತ್ರ್ಯವನ್ನು ನೀಡುವ ನೆಪದಲ್ಲಿ ಹೆಣ್ಣು ಇಂದಿಗೂ
ಹಲವು ಹೊತ್ತು ಕಿರುಕುಳಗಳಿಗೆ ಒಳಗಾಗಿಟ್ಟಿದ್ದಾಳೆ. ಮೊದಲು ಅವುಗಳನ್ನು ತಿಳಿದುಕೊಳ್ಳಬೇಕಾಗಿದೆ.
ಹೆಣ್ಣಿಗೆ ಇಸ್ಲಾಂ ನೀಡಿದ ಗೌರವದ ಬಗ್ಗೆ ಇತಿಹಾಸವೇ ಮೆಚ್ಚುಗೆಯ ಮಾತುಗಳನ್ನಾಡಿದೆ .
ಮಹಿಳೆಯರು ಎದುರಿಸುವ ಸಮಸ್ಯೆಗಳು :
ಭ್ರೂಣ ಹತ್ಯೆ
ಜಗತ್ತು ಅತ್ಯಾಧುನಿಕ
ತಂತ್ರಜ್ಞಾನಗಳಿಂದ ಮುಂದುವರೆಯುತ್ತಿದ್ದರೂ ಹೆಣ್ಣಿನ ಪಾಲಿಗೆ ಶೋಷಣೆ ಅಂತ್ಯವಾಗದೆ ಮುಂದುವರಿಯುತ್ತಿದೆ.
ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ. ಸುರಕ್ಷಿತ ಹೆರಿಗೆಗೆ ಬಳಸಲ್ಪಡುವ ಸ್ಕಾನಿಂಗ್,
ಅಲ್ಟ್ರಾಸೌಂಡ್ ಯಂತ್ರದ ಬಳಕೆ
ಇದರಿಂದ ಎಚ್ಚರ ವಹಿಸುವುದು ಅತ್ಯಗತ್ಯ.
ಲೈಂಗಿಕ ಶೋಷಣೆ
ಅಪ್ರಾಪ್ತ ವಯಸ್ಸಿನ
ಹುಡಿಗಿಯರನ್ನು ಪುಸಲಾಯಿಸಿ, ಅಪಹರಿಸಿ ಹೆತ್ತವರಿಗೆ
ಆಮಿಷ ನೀಡಿ ಬಲವಂತವಾಗಿ ಶೋಷಣೆಗೆ ಒಳಪಡಿಸಲಾಗುತ್ತೋದೆ. ಬ್ರೆಜಿಲ್ ದೇಶದಲ್ಲಿ 2.5 ರಿಂದ 5ಲಕ್ಷದಷ್ಟು ಮಕ್ಕಳು ಲೈಂಗಿಕ ವ್ಯಾಪಾರದ ಸರಕುಗಳಾಗಿ ಮಾರ್ಪಟ್ಟರೆ ಫಿಲಿಫೈನಿನಲ್ಲಿ 60-75,
ಥೈಲಾಂಡ್ ನಲ್ಲಿ 8-10 ಲಕ್ಷದಷ್ಟು ಬಾಲಕಿಯರನ್ನು ವೇಶ್ಯಾಲಯದಲ್ಲಿ ಕಂಡುಬರುತ್ತಿದ್ದಾರೆ.
ದುಡಿಮೆ
ನೌಕರಿಯನ್ನರಸುವ ಮಹಿಳೆಯರು
ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಇಂದು ಕೌಟುಂಬಿಕ ವಲಯದಲ್ಲಿ ಕುಟುಂದ ನಿರ್ವಹಣೆ,
ಮಕ್ಕಳ ಪಾಲನೆ-ಪೋಷಣೆ ಇತ್ಯಾದಿಗಳಿಗೆ
ಮಾತ್ರ ಸೀಮಿತವಾಗಿರುವುದಿಲ್ಲ. ಅವರು ಬೆಳ್ಳಂಬೆಳಗ್ಗೆ ಎದ್ದು ಅಡುಗೆ ಮಾಡಿ, ಶಾಲೆಗೆ ಹೋಗುವ ಮಕ್ಕಳನ್ನು ಸಿದ್ಧಪಡಿಸಿ ನಂತರ ಹೊರಹೋಗಿ
ದುಡಿಯುವ ಅದೆಷ್ಟೋ ಮಹಿಳೆಯರಿದ್ದಾರೆ. ಹೀಗೆ ಬೆಳಿಗ್ಗೆಯಿಂದ ಮುಸ್ಸಂಜೆಯ ತನಕ ವಿಶ್ರಮವಿಲ್ಲದೆ ದುಡಿಯುತ್ತಿರುವ
ಮಹಿಳಯರು ದೈಹಿಕವಾಗಿಯೂ ಮಾನಸಿಕವಾಗಿಯೂ ಒತ್ತಡಗಳನ್ನು ಎದುರಿಸುತ್ತಿದ್ದಾರೆ.
ದೌರ್ಜನ್ಯಗಳು
ಸ್ತ್ರೀಯರ ಮೇಲೆ ಅತ್ಯಾಚಾರ,
ಬಲತ್ಕಾರ, ದೌರ್ಜನ್ಯ, ವರದಕ್ಷಿಣೆ- ಕಿರುಕುಳ,ಆತ್ಮಹತ್ಯೆ, ಕೊಲೆ ಇತ್ಯಾದಿ ಪ್ರಕರಣಗಳ ದಾಖಲೆಗಳನ್ನು ಲೆಕ್ಕ ಮಾಡಲು
ಕಷ್ಟಸಾಧ್ಯ. ಪ್ರತೀ ದಿನ 60 ಕ್ಕೂ ಹೆಚ್ಚು ಸ್ತ್ರೀಯರು
ಆತ್ಮಹತ್ಯೆ ಮಾದುತ್ತಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಹೊರಡಿಸಿದ ಅಂಕಿ ಅಂಶದಿಂದ ತಿಳಿದು
ಬಂದಿದೆ. ಈ ರೀತಿಯಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದುರಾಕ್ರಮಣಗಳು ಹೆಚ್ಚಾಗುತ್ತಲೇ ಇದೆ.
ಮಹಿಳೆಯರಿಗೆ ಇಸ್ಲಾಂ ಕೊಡುವ ಗೌರವ
ಮಹಿಳೆಯ ವ್ಯಕ್ತಿತ್ವವನ್ನು
ಅಂಗೀಕರಿಸಿ, ಅವಳನ್ನು ಗೌರವಿಸುವುದು
ಇಸ್ಲಾಮಿನ ನೀತಿ ನಿಯಮವಾಗಿದೆ. ಪ್ರವಾದಿವರ್ಯರು ನಡೆಸಿದ ಸ್ತ್ರೀ ವಿಮೋಚನಾ ಚಳುವಳಿಯಿಂದ ಹಣ್ಣಿನ
ಗೌರವ, ಮಾನ್ಯತೆ, ಘನತೆಯು ಸಮಾಜದ ಮುಂದೆ ಮಾನ್ಯತೆಯನ್ನು ಪಡೆದಿದೆ.
ಬುಖಾರಿ (ರ) ಉಲ್ಲೇಖಿಸುತ್ತಾರೆ:ಆಯಿಶ
(ರ) ನುಡಿಯುತ್ತಾರೆ: ನನ್ನ ಬಳಿ ಕಡುಬಡವಳಾದ ಮಹಿಳೆಯೊಬ್ಬಳು ಎರಡು ಹೆಣ್ಮಕ್ಕಳನ್ನು ಹೊತ್ತು ಬಂದಳು.
ಅವಳಿಗೆ ತನ್ನ ಬಳಿಯಲ್ಲಿರುವ ಒಂದು ಖರ್ಜೂರವನ್ನು ನೀಡಿದೆ. ಅವಳು ತನ್ನ ಇಬ್ಬರು ಮಕ್ಕಳಿಗೆ ಖರ್ಜೂರವನ್ನು
ಸಮಪಾಲುಮಾಡಿ ಹಂಚಿದಳು. ಅವಳು ಅಲ್ಲಿಂದ ಹೊರಟ ನಂತರ ನಾನು ಈ ಘಟನೆಯನ್ನು ಪ್ರವಾದಿವರ್ಯರಗೆ ವಿವರಸಿದೆ.
ಪ್ರವಾದಿವರ್ಯರ ಉತ್ತರ ಹೀಗಿತ್ತು: ಯಾರು ಆ ಮಕ್ಕಳಿಗೆ ಒಳಿತನ್ನು ಮಾಡಿದರೋ ಅವರಿಗೆ ನರಕವನ್ನು ನಿಷೇಧಿಸಲಾಗಿದೆ.
ಸ್ತ್ರೀಯರ ಸಂರಕ್ಷಣೆ
ಹಾಗೂ ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸುವುದಕ್ಕಾಗಿ ಎದುರಿಸಿದ ಸಮಸ್ಯೆಗಳಿಗೆ ಪ್ರತಿಫಲ ನೀಡಲಾಗುತ್ತದೆ.
ಅವರ ಮೇಲೆ ಕರುಣೆ, ಪ್ರೀತಿ, ಗೌರವ ತೋರುವುದು ಪ್ರವಾದಿವರ್ಯರೊಂದಿಗೆ ಸ್ವರ್ಗಕ್ಕೆ ಪ್ರವೇಶಿಸಲು
ಕಾರಣವಾಗಬಹುದು.
ಈ ರೀತಿ ಸ್ತ್ರೀಯರಿಗೆ ಸ್ವತಂತ್ರ್ಯವಾಗಿ ಬದುಕುವ ಹಕ್ಕನ್ನು ನೀಡಿದ
ಇಸ್ಲಾಂ ಧರ್ಮವು ಒಂದು ಹೆಣ್ಣಿಗೆ ತನ್ನ ಎಲ್ಲಾ ಹಕ್ಕುಗಳು ಹಾಗೂ ಸ್ಥಾನಮಾನಗಳನ್ನು ನೀಡಿದೆ.
— Author —
Mashallah🥰