ಮನುಷ್ಯ ಎಂಬುವ ಬುದ್ಧಿಜೀವಿ
ಒಂದೇ ಮಣ್ಣಿನ ಭಾಗ,ಆದರೆ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಕೆಲವರು ರೂಪದಲ್ಲಿದ್ದರೂ, ಸ್ವಭಾವ ಗುಣಗಳಲ್ಲಿ
ಒಂದೇ ರೀತಿ ಇರುವುದಿಲ್ಲ. ಎಲ್ಲರಿಗೂ ಅಲ್ಲಾಹನು ಚಿಂತನಾಶಕ್ತಿ ಕೊಟ್ಟಿದ್ದಾನೆ . ಎಲ್ಲರೂ ಚಿಂತಿಸುತ್ತಾರೆ, ಎಲ್ಲವನ್ನೂ ಚಿಂತಿಸುತ್ತಾರೆ.
ಅದರಲ್ಲಿ ಕೆಲವರು ಹೆಸರು ಪಡೆಯುತ್ತಾರೆ, ಕೆಲವರು ಕೆಸರೂ ಪಡೆಯುತ್ತಾರೆ, ಕೆಲವರು ಏನೂ ಪಡೆಯುವುದ್ದಿಲ್ಲ.
ಯಾಕೆಂದರೆ ಎಲ್ಲರೂ ಚಿಂತಿಸುತ್ತಿದ್ದರೂ, ಕೆಲವರ ಚಿಂತೆ ಅಸಾಮಾನ್ಯ.
ಒಂದು ಮನೆಯಲ್ಲಿ ತಂದೆ, ತಾಯಿ ಮತ್ತು ಮಗ ಇರುತ್ತಾರೆ.
ಆ ಮನೆಯಲ್ಲಿ ಯಾವಾಗಲೂ ತಂದೆ ಮಗನನ್ನು ಯಾವುದಕ್ಕೂ ಬಾರದವ, ದಡ್ಡ , ಪೆದ್ದ ಎಂದೆಲ್ಲಾ ಬೈಗುಳದ
ಸರಮಾಲೆ ಎಳೆಯುತ್ತಿದ್ದರು. ಆ ಚಿಂತೆ ಅವರನ್ನು ಬೇರೆ ಬೇರೆ ಹಂತಕ್ಕೆ ತಲುಪುವಂತೆ ಮಾಡಿತು. ಹಾಗೆ
ಮಗನನ್ನು ಒಂದು ದೂರದ ಹಾಸ್ಟೆಲ್ ಗೆ ಹಾಕುತ್ತಾರೆ. ಆಗಲೂ ಅವನು ಅಲ್ಲಿಯೂ ಏನಾಗಲ್ಲ ಎಂದೇ ತಂದೆ ಹೇಳುತ್ತಾರೆ.
ಹಾಗೆ ಕೆಲವು ವರ್ಷಗಳು ತಂದೆ ಮಗನ ಬಗ್ಗೆ ಹೇಳದೆ ಕಳೆದು ಹೋಗುತ್ತದೆ. ಅಷ್ಟರವರೆಗೆ ಜಸ್ಟ್ ಪಾಸ್ ಆಗುತ್ತಿದ್ದವ, ಈ ಬಾರಿ 10 ನೇ ತರಗತಿಯಲ್ಲಿ ಮೊದಲನೆಯ
ಸ್ಥಾನ ಪಡೆದಿರುತ್ತಾನೆ. ಇದರ ರಹಸ್ಯ ಏನೆಂದರೆ ಮಗನಿಗೆ ಅಷ್ಟು ವರ್ಷ ಬೈಗಳು ಮಾತ್ರ ಬಿದ್ದು ಏನು
ಮಾಡಲಾಗುತ್ತಿರಲಿಲ್ಲ. ಆದರೆ ದೂರ ಹೋದವನಿಗೆ ಯಾವಾಗಲು ತಾಯಿ ಕಾಲ್ ಮಾಡಿ ” ಮಗ ನೀನು ಮೊದಲನೆಯ
ಸ್ಥಾನ ಪಡೆಯಲು ಸಾಧ್ಯವಿರುವವ, ನೀನು ಬುದ್ಧಿಶಾಲಿ, ಎಂದೆಲ್ಲ ದಿನಾಲೂ ಹೇಳುತ್ತಿದ್ದಂತೆ
ಮಗನ ಚಿಂತನೆಗಳಲ್ಲಿ, ಬೆಳವಣಿಗೆಯಲ್ಲಿ ಬದಲಾವಣೆಯಾಗುತ್ತದೆ. ಹಾಗೆ ‘ತನ್ನನ್ನು ಕೀಳರಿಮೆಯಲ್ಲಿ
ನೋಡಿದವರ ಬಾಯಿಯಿಂದ ನನ್ನನ್ನು ಮೇಲಾಗಿಸುತ್ತೇನೆ‘ ಎಂಬ ಛಲದಿಂದ ಆತ ಮುಂದುವರಿಯುತ್ತಾನೆ.
ಇಲ್ಲಿ ತಂದೆ-ತಾಯಿ ಇಬ್ಬರೂ
ಮನುಷ್ಯರೇ… ಇಬ್ಬರೂ ತಿಳಿ ಮಾತೇ ಹೇಳಿದ್ದು, ಆದರೆ ಸಮಾನ್ಯವಾಗಿ ತಂದೆಯ ಶೈಲಿಯಲ್ಲಾಗಿರಲಿಲ್ಲ ತಾಯಿ ಹೇಳಿದ
ತಿಳಿ ಮಾತು.ಅದು ಅಸಾಮಾನ್ಯವಾಗಿತ್ತು!ಆದ್ದರಿಂದ ಅಸಾಧ್ಯವೆಂಬ ಮಾತು ಸಾಧ್ಯವಾಯಿತು.
ಮಾನವನ ಚಿಂತೆ ಅಪಾರವಾದದ್ದು.
ಅವನೇ ಈ ಚಪ್ಪಲಿ ಮಾಡಿದ್ದು, ಅವನೇ ಚಂದ್ರಯಾನ ಕ್ಷಿಪಣಿ ಮಾಡಿದ್ದು. ಅಲ್ಲಿ ಉದ್ದೇಶ ಒಂದೇ
‘ ನಾಳೆಯ ಜನತೆಗೆ ಕಲೆಯಾಗಿ ಉಳಿಯಬೇಕು. ಇಲ್ಲಿ ಚಪ್ಪಲಿ ಮಾಡಿದವ
ಒಂದೋ, ಎರಡೋ.. ಬಾರಿ ಚಿಂತಿಸಿರಬಹುದು. ಆದರೆ ಕ್ಷಿಪಣಿ ಶಿಲ್ಪಿ
ನೂರೋ … ಸಾವಿರಾರೋ ಬಾರಿ ಚಿಂತಿಸಿರುತ್ತಾನೆ.
ಸಾಮಾನ್ಯವಾದ ಚಿಂತನೆಯಿಂದ
ಸಾಮಾನ್ಯವಾದದ್ದೇ ಮಾಡಲು ಸಾಧ್ಯ. ಆದರೆ ಅಸಾಮಾನ್ಯ ಚಿಂತನೆಯಿಂದ ಅಸಾಮಾನ್ಯರಾಗಬಹುದು…
ಅಲ್ಲಿ ತಾಯಿಯೂ ತಂದೆಯ
ಕೈಜೋಡಿಸಿದ್ದರೆ, ಮಗ ದಡ್ಡನಾಗಿ ಬಾಳುತ್ತಿದ್ದ. ಕ್ಷಿಪಣಿ ಶಿಲ್ಪಿ ಎರಡೋ, ಮೂರೋ ಬಾರಿ ಚಿಂತಿಸಿದ್ದರೆ, ಚಪ್ಪಲಿ ಹೊಲಿಯುವವನಾಗಿರುತ್ತಿದ್ದ.
ಹೀಗೆಂದು ನಾವು ಚಪ್ಪಲಿ
ವ್ಯಾಪಾರಸ್ಥರನ್ನು ಕೀಳಾಗಿ ಕಾಣಬಾರದು. ನಮಗೆ ಎಲ್ಲರೂ ಬೇಕು, ಎಲ್ಲವೂ ಬೇಕು. ಆದರೆ ನಮ್ಮ ಚಿಂತಾ
ಮಂಡಲ ಅಸಾಮಾನ್ಯವಾಗಿರಬೇಕು.
ಜನಸಾಮಾನ್ಯರ ನಡುವೆ
ನಾವು ಅಸಾಮಾನ್ಯರಾಗಬೇಕು…
— Author —
Lucky Club | Lucky Club Live Casino, Games, Roulette
Live casino casino games. All our latest & exclusive slots & live games available at Lucky Club. Our online gambling luckyclub.live hub boasts over 3000+ casino games,