ಹೌದು… ಅದೇ ಗೋಬಲ್ಸ್ ಇತಿಹಾಸವು ಇಂದು ಆವರ್ತನೆಯಾದಂತಿದೆ. ಅಸಮರ್ಥರೆನ್ನುವ ಅರೆಜ್ಞಾನಿಗಳನ್ನು ಅರ್ಹಜ್ಞಾನಿಗಳ ಸ್ಥಾನದಲ್ಲಿ ಕುಳ್ಳಿರಿಸಿ ಸಮರ್ಥರೆನ್ನುವ ಕಹಳೆಯನ್ನು ಜನರೆಡೆಗೆ ಮೊಳಗಿಸಲಾಗುತ್ತಿದೆ.
ಅರ್ಹ ಅಭ್ಯರ್ಥಿಗಳ ಲಭ್ಯತೆಯೆಡೆ ಅಸಮರ್ಥರನ್ನು ಮುನ್ನೆಲೆಗೆ ತಂದು ತಮ್ಮ ವಕ್ರ ಚಿಂತನೆಯನ್ನು ಪಕ್ಕಾ ನಡೆಸಲು ತಯಾರಾಗಿದೆ. ಅದಕ್ಕೆ ಸಣ್ಣ ಪುರಾವೆ ಎಂಬಂತೆ ಮಹಾತ್ಮರಾದ ಗೌತಮ ಬುಧ್ದ ಭಗತ್ ಸಿಂಗ್ ಸರ್ ವಿಶ್ವೇಶ್ವರಯ್ಯ ಸೇರಿದಂತಿಹ ಚೇತನ ಸ್ವರೂಪಿಗಳನ್ನು ಬದಿಗೊತ್ತಿ ಹೆಡ್ಗೆವಾರ್ ಹಾಗು ಸೂಲಿಬೆಲೆಯಂತಹಾ ವಿವಾದಾತ್ಮಕ ವ್ಯಕ್ತಿಗಳನ್ನು ಮಕ್ಕಳಿಗೆ ಮಹಾತ್ಮರಾಗಿ ಪರಿಚಯಿಸಿ ಕೊಡುವ ಪ್ರಯತ್ನಕ್ಕೆ ಸರ್ಕಾರವು ಕೈ ಹಾಕಿದೆ.
ಅರೆಬರೆ ಕಲಿತು ಅಕ್ಷರ ಸಂತರಂತೆ ಮೇಳೈಸುವ ಕೆಲ ಅನ್ಪಡ್ಗಳನ್ನು ಇಂದಿನ ಸರಕಾರವು ಜ್ಞಾನಭಂಡಾರದಂತೆ ಚಿತ್ರೀಕರಿಸಿದೆ. ರೋಹಿತ್ ಚಕ್ರತೀರ್ಥ ಎಂಬ ಫೇಸ್ಬುಕ್ ಟ್ರೋಲರ್ನನ್ನು ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರಾಗಿ ನೇಮಿಸಿದೆ. ಈತ ಬರೀ ಟ್ರೋಲರ್ ಮಾತ್ರವಲ್ಲ ನಾಡಗೀತೆಯನ್ನು ಅವಮಾನ ಮಾಡಿದ ಅಪರಾಧ ಹೊತ್ತ ವ್ಯಕ್ತಿ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪುರವರ ಕುರಿತು ಅಸಭ್ಯವಾಗಿ ಗೀಚಿದ ಸಂಘನಿಷ್ಠ. ಅದರೂ ಈತನ ಬಗ್ಗೆ ಯಾವುದೇ ಅಗೌರವ ತೋ
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷನನ್ನಾಗಿ ನೇಮಿಸಿದಿನಂದಲೂ ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಸಾಹಿತಿಗಳೂ ಸೇರಿ ಹಲವರು ಈ ನಿರ್ಧಾರವನ್ನು ನಕಶಿಖಾಂತವಾಗಿ ವಿರೋಧಿಸಿದ್ದರು. ಆದರೂ ತನ್ನ ಜಾಡು ಬಿಡದ ಸರಕಾರವು ಕುತ್ಸಿತ ವ್ಯಕ್ತಿಗಳನ್ನು ಪ್ರಖ್ಯಾತಗೊಳಿಸಲು ಗೋಬೆಲ್ಸ್ ನೀತಿಯನ್ನು ಯಾಮಾರಿಸಿದೆ. ಆತನ ಶಿಕ್ಷಾಣಾರ್ಹತೆ ಹಾಗೂ ಯೋಗ್ಯತೆ ಕುರಿತು ಭುಗಿಲೆದ್ದ ವ್ಯಾಪಕ ವಿರೋಧಗಳಿಗೆ ಉತ್ತರಿಸಿದ ಸರಕಾರವು “ಇವನೊಬ್ಬ ಐಐಟಿ ಹಾಗೂ ಸಿಐಟಿ ಆಫೀಸರ್” ಎಂದು ಉತ್ತರಿಸಿ ನಗೆಪಾಟಲೆಗೀಡಾಗಿದೆ. ಈತ ಸಂಘ ಪಾಲನೆಗೆ ಅರ್ಹನೆ ಹೊರತು ವಿದ್ಯಾಲಯ ನಿರ್ವಹಣೆಗಳ್ಳ ಎಂಬೂದು ಈತನ ವಿಧ್ಯಾಭ್ಯಾಸದ ಹಿನ್ನಲೆಯಿಂದ ಕಂಡುಕೊಳ್ಳಬಹುದು.
ನಿಜಕ್ಕೂ ಈ ಸರ್ಕಾರದ ನೇರ ಗುರಿ ಕೇಸರೀಕರಣವಾಗಿದೆ. ತನ್ನ ಅಜೆಂಡಾವನ್ನು ಸಾಕಾರಗೊಳಿಸಲು ಸರ್ವ ಮಜಲುಗಳಲ್ಲಿ ವ್ಯತರಿಕ್ತ ಕುತಂತ್ರಗಳನ್ನು ಪ್ರಯೋಗಿಸುತ್ತಿದೆ. ಬರಗೂರು ರಾಮಚಂದ್ರಪ್ಪರವರ ಸಮಿತಿಯು ರಚಿಸಿದ್ದ ಪಠ್ಯಪುಸ್ತಕಕ್ಕೆ ವಿರೋಧಗಳು ವ್ಯಕ್ತವಾಗಿರಲಿಲ್ಲ ಕಾರಣ ಅರ್ಹರ ಸ್ಥಾನಕ್ಕೆ ಸಮರ್ಥರನ್ನೇ ಆಯ್ಕೆಮಾಡಲಾಗಿತ್ತು. ಆದರೆ ಈಗಿನ ಸಮಿತಿಯು ಪ್ರಸಿಧ್ದ ಕವಿ ಸಾಹಿತಿಗಳ ಸ್ಥಾನಕ್ಕೆ ಖ್ಯಾತ ಅರೆ ಸಾಹಿತಿಗಳನ್ನು ಆಯ್ದುಕೊಂಡಿದೆ.