ಅರೇಬಿಯಾದಲ್ಲಿ ಶತಮಾನಗಳ ಹಿಂದೆ ವಿಗ್ರಾಹಾರಾಧನೆ ಹಾಗೂ ಬಹುದೇವಾರಾಧನೆಗಳಿಂದ ಕಲುಷಿತಗೊಂಡಿತ್ತು.ಪ್ರಾರಂಭದಲ್ಲಿ ಇಸ್ಲಾಂ ಧರ್ಮದ ಬಹಿರಂಗ ಪ್ರಚಾರಕ್ಕೆ ಮಕ್ಕಾ ದೇಶ ಸಿದ್ಧವಾಗಿರಲಿಲ್ಲ, ಆ ಕಾರಣದಿಂದ ಪ್ರವಾದಿಯವರಿಗೆ ನುಬುವ್ವತ್ ಸಾಕ್ಷಾತ್ಕಾರಗೊಂಡಂದಿನಿಂದ ಮೂರು ವರ್ಷಗಳ ಕಾಲ ತನ್ನ ನುಬುವ್ವತಿನ ಬಗ್ಗೆ ರಹಸ್ಯವಾಗಿ ಪ್ರಚಾರವನ್ನು ಕೈಗೊಂಡರು. ಅವರೊಂದಿಗೆ ಯಾರೂ ಸಹವರ್ತಿಯಾಗಿರದಿದ್ದರೂ ಆಧ್ಯಾತ್ಮಿಕ ಪ್ರವಚನ ಹಾಗೂ ಅಲ್ಲಾಹನಿಗೆ ಸ್ತುತಿಸುತ್ತಾ ಪ್ರಾರ್ಥಿಸುತ್ತಿದ್ದರು.ಬಳಿಕ ಅಲ್ಲಾಹನ ಆಜ್ಞೆಯ ಪ್ರಕಾರ ತನಗೆ ಲಭಿಸಿದ ಪುಣ್ಯ ಸಂದೇಶವನ್ನು ಜನರೆಡೆಯಲ್ಲಿ ತಿಳಿಹೇಳಿದರು. ಪ್ರಾರಂಭದಲ್ಲಿ ತನ್ನ ಸ್ನೇಹಿತರಾದ ಅಬೂಬಕರ್ ಸಿದ್ದೀಖ್ (ರ), ಸ್ತ್ರೀಗಳಿಂದ ತನ್ನ ಪತ್ನಿ ಖದೀಜ (ರ) ಹಾಗೂ ಮಕ್ಕಳಿಂದ ತನ್ನ ಮಾವನ ಮಗ ಅಲೀ (ರ), ಈ ಮೂವರು ಮಾತ್ರ ಪ್ರವಾದಿಯವರ ನುಬುವ್ವತ್ತಿನಲ್ಲಿ ವಿಶಾವಸವಿಟ್ಟು ನಂತರ ಖುರೈಶ್ ನೇತಾರರು ಕ್ರಮೇಣ ಪೈಗಂಬರರ ಸಂದೇಶವನ್ನು ಪಾಲಿಸತೊಡಗಿದರು.
ಮೊದಲ ಆಹ್ವಾನ
ಪವಿತ್ರ ಪ್ರವಾದಿಯವರು ಇಸ್ಲಾಮಿನ ಆಚರಣೆ ಹಾಗೂ ತಮ್ಮಲ್ಲಿ ಮೈಗೂಡಿಸಿಕೊಂಡಿದ್ದ ಸದ್ಗುಣಗಳ ಮೂಲಕ ಅನುಯಾಯಿಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಯಿತು.ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಸ್ಲಾಂ ಧರ್ಮದೆಡೆಗೆ ಮುಕ್ತವಾಗಿ ಪ್ರವೇಶಿಸಲು ದಾರಿಮಾಡಿಕೊಟ್ಟಿತು.
ಇಸ್ಲಾಂನ ಮುಕ್ಕ ಪ್ರಸಾರಕ್ಕೆ ವಾತಾವರಣ ಸೂಕ್ತವಿದ್ದಾಗ, ಪ್ರವಾದಿಯವರು ಅಲ್ಲಾಹನು ಪ್ರವಾದಿವರ್ಯರಿಗೆ ತನ್ನ ಹತ್ತಿರದ ಸಂಬಂಧಿಕರನ್ನು ಆಹ್ವಾನಿಸುವಂತೆ ಆಜ್ಞಾಪಿಸಿದನು. ಪ್ರವಾದಿಯವರು ಸಫಾ ಪರ್ವತವನ್ನು ಹತ್ತಿ, ಜನರ ಗಮಮನವನ್ನು ತನ್ನೆಡೆಗೆ ಸೆಳೆದರು. ಈ ಪರ್ವತದ ಹಿಂಭಾಗದಲ್ಲಿ ನಿಮ್ಮನ್ನು ಅಕ್ರಮಿಸಲು ಕುದುರೆ ಸವಾರರು ಸಜ್ಜಾಗಿ ನಿಂತಿದ್ದಾರೆ ಎಂದರೆ ನೀವು ನನ್ನನ್ನು ನಂಬುವಿರಾ– ಎಂದಾಗ, ಚಿಕ್ಕವಯಸ್ಸಿನಿಂದಲೇ ಅಲ್–ಅಮೀನೆಂದು ಕರೆಯುತ್ತಿದ್ದು, ಎಲ್ಲರೂ – ಹೌದು ನಾವು ನಿಮ್ಮನ್ನು ಒಮ್ಮೆಯೂ ಸುಳ್ಳಾಗಿ ಎಣಿಸಲಿಲ್ಲ ಎಂದು ಉತ್ತರವಿತ್ತರು. – ಹಾಗಾದರೆ ಕೇಳಿ – ಓ ಜನರೇ – ತುಳಿತಕ್ಕೊಳಗಾದವನನ್ನು ನೋವಿಸಿ ಹಿಂಸೆಕೊಡುವ ಬಗ್ಗೆ ನಿಮಗೆ ಎಚ್ಚರ ನೀಡಲು ಹಾಗೂ ಧರ್ಮನಿಷ್ಠ ವಿಶ್ವಾಸಿಗಳಿಗೆ ಪ್ರತಿಫಲದ ಸುವಾರ್ತೆಯನ್ನು ನೀಡಲು ಅಲ್ಲಾಹನು ನನ್ನನ್ನು ನಿಯೋಜಿಸಿದ್ದಾನೆ. ಮೋಕ್ಷವನ್ನು ಸಾಧಿಸಲು ಇಸ್ಲಾಮನ್ನು ಸ್ವೀಕರಿಸಿ ಮತ್ತು ನನ್ನನ್ನು ಹಿಂಬಾಳಿಸಿರಿ,
ಸರ್ವಶಕ್ತನಾದ ದೇವರ ಮೇಲೆ ಪ್ರಮಾಣ ಮಾಡುತ್ತೇನೆ,
ಎಲ್ಲಾ ಅರಬ್ಬರಲ್ಲಿ ನಾನು ನಿಮಗೆ ತಂದಿರುವುದಕ್ಕಿಂತ ಯಾರೂ ಉತ್ತಮವಾದ ಸಂದೇಶವನ್ನು ತಂದ ಬಗ್ಗೆ ನಾನು ತಿಳಿದಿಲ್ಲ. ನಾನು ನಿಮಗೆ ಸಮೃದ್ಧಿ ಮತ್ತು ಮೋಕ್ಷವನ್ನು ಈ ಜಗತ್ತಿನಲ್ಲಿ ಮತ್ತು ಮುಂದಿನ ದಿನಗಳಲ್ಲಿ ತಂದಿದ್ದೇನೆ. ಅಲ್ಲಾಹನು ನಿಮ್ಮೆಲ್ಲರನ್ನೂ ಅವನಿಗೆ ಆರಾಧಿಸಲು ಕರೆಯುವಂತೆ ನನಗೆ ಆಜ್ಞಾಪಿಸಿದ್ದಾನೆ. ಆಗ ಅಬೂಜಹಲ್ ಅವರನ್ನು ಅಪಹಾಸ್ಯಪಡಿಸಿ ನಿರಾಕರಿಸಿದರು.
ಪ್ರವಾದಿಯವರು ಸತ್ಯದ ಹಾದಿಯನ್ನು ತನ್ನ ಉಮ್ಮತಿಗೆ ಬೋಧಿಸಲು ಪ್ರಾರಂಭಿಸಿದರು. ಆದರೆ ಅಜ್ಞಾನ ಮತ್ತು ಮತಾಂಧತೆಯು ಕೆಲ ಅವಿಶ್ವಾಸಿಗಳನ್ನು ಅಲ್ಲಾಹನ ಸಂದೇಶವನ್ನು ನಂಬದಂತೆ ತಡೆಯಿತು. ಆದಾಗ್ಯೂ, ಇಸ್ಲಾಂ ತನ್ನ ಹಿತನುಡಿಗಳನ್ನು ಪ್ರಚೋದಿಸುವಲ್ಲಿ ಮೇಲುಗೈ ಸಾಧಿಸಿದೆ.
ಪ್ರವಾದಿವರ್ಯರು ಈ ದೈವಿಕ ಕರ್ತವ್ಯವನ್ನು ಪೂರೈಸುವಲ್ಲಿ ಅವಿಶ್ರಾಂತ ಪರಿಶ್ರಮ, ಅಮೂಲ್ಯವಾದ ಬೋಧನೆಗಳು ಹಾಗೂ ತಮ್ಮಲ್ಲಿ ಅಂಟಿಕೊಂಡಿದ್ದ ಸದ್ಗುಣಗಳ ಮೂಲಕ ಶಾಂತಿಪೂರಿತ ಇಸ್ಲಾಮಿನ ಭವ್ಯ ಬಾವುಟವನ್ನು ಪ್ರಪಂಚದ ಅಷ್ಟದಿಕ್ಕುಗಳಲ್ಲಿ ರಾರಾಜಿಸುವಂತೆ ಮಾಡಿತು.