ಬಿಳಿಯರ ಆಡಳಿತಾವಧಿಯಲ್ಲಿ ಭಾರತದ ಪ್ರಜೆಗಳು ಗುಲಾಮರಾಗಿ ಜೀವಿಸುತ್ತಿದ್ದರು. ವ್ಯಾಪಾರಕ್ಕಾಗಿ ಕಾಲಿಟ್ಟ ಬಳಿಕ ಆ ದೇಶವನ್ನೇ ತನ್ನ ಬಲೆಗೆ ಹಾಕಿಕೊಂಡರು.
ಈ ದೇಶದ ಬೆಲೆಬಾಳುವ ಎಲ್ಲಾ ವಸ್ತುಗಳನ್ನು ದೋಚಿಕೊಂಡರು, ಕೇವಲ ಸರಕುಗಳಲ್ಲದೆ ವೈಯಕ್ತಿಕ ಸ್ವಾತಂತ್ರ್ಯವನ್ನೂ ಕಸಿದುಕೊಂಡರು. ಕೊನೆಗೆ ಭಾರತದ ಪ್ರಜೆಗಳು ಬಿಳಿಯರ ಕೈಗೊಂಬೆಗಳಾದರು.
ಹೀಗಿರುವಾಗ, ಹಲವು ಹೋರಾಟಗಳು, ಚಳುವಳಿಗಳು, ಯುದ್ಧಗಳೂ ನಡೆಯಿತು. ಆಗ ಭಾರತದ ಸ್ವಾತಂತ್ರ್ಯಕ್ಕಾಗಿ ಹಿರಿಯ-ಕಿರಿಯರೆಲ್ಲರೂ ಸೇರಿ ಹಗಳಿರುಳು ಹೋರಾಡಿದರು. ಹಲವು ಮಂದಿ ನೇಣುಗಂಬಕ್ಕೇರಿದರು. ಜೀವಾವಧಿ ಶಿಕ್ಷೆಯನ್ನು ಅನುಭವಿಸಿದವರೂ ಇದ್ದರು. ತಮ್ಮ ಮಕ್ಕಳನ್ನೇ ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟರು. ಒಟ್ಟಾರೆ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಕತ್ತಲ ಕೋಣೆಗೆ ಬೆಳಕು ಚೆಲ್ಲಿದರು. ಅಂದು ಭಾರತವು ಸ್ವಾತಂತ್ರ್ಯ ದೇಶವಾಗಿ ಮಾರ್ಪಟ್ಟಿತು.
ಇಂದಿಗೂ ಅವರ ಶಕ್ತಿ ಬುದ್ಧಿವಂತಿಕೆ ಧೈರ್ಯ ಮತ್ತು ಶೌರ್ಯದ ಕಥೆಗಳು ಅಳಿಸಲಾಗದ ಹೆಗ್ಗುರುತುಗಳಾಗಿ ಉಳಿದಿದೆ. ಇಂದು ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೇಶದ ಮೂಲೆ ಮೂಲೆಗಳಲ್ಲೂ ಸ್ವಾತಂತ್ರ್ಯ ವೀರರ ತ್ಯಾಗದ ಸವಿ ನೆನಪುಗಳನ್ನು ಸ್ಮರಿಸಲಾಗುತ್ತಿದೆ.
ಅಂದು ಜಾತಿ ಭೇದವಿಲ್ಲದೆ ಒಂದೇ ತಾಯಿಯ ಮಕ್ಕಳಂತೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಿಳಿಯರ ಕೈಯಿಂದ ಸ್ವಾತಂತ್ರ್ಯವನ್ನು ಪಡೆದರು. ಇದಾದ ಬಳಿಕವೂ ಸಾಕಷ್ಟು ಮಂದಿ ಭಾರತದಲ್ಲಿ ಗುಲಾಮರಂತೆಯೇ ಜೀವಿಸುತ್ತಿದ್ದಾರೆ. ಕೆಳ ಜಾತಿ ಮೇಲ್ಜಾತಿ ಎಂಬ ನೆಪವೂ ಇನ್ನೂ ಅಳಿಯದೆ ಉಳಿದಿದೆ. ಜಾತೀಯತೆಯಿಂದ ಇನ್ನೂ ಯುವ ಜನತೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಅದಲ್ಲದೆ ಕಾನೂನಾತ್ಮಕವಾಗಿ ದ್ರೋಹನ್ನು ಬಗೆಯುತ್ತಿದ್ದಾರೆ. ನಮ್ಮ ದೇಶ ನಮ್ಮ ಆಡಳಿತ ಎಂಬಂತೆ ಭಾರತದ ಪ್ರಜೆಗಳಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ. ಹಲವೆಡೆ ದೌರ್ಜನ್ಯಗಳು ನಡೆದರೂ ಮೌನಕ್ಕೆ ಶರಣಾಗುತ್ತಿದ್ದಾರೆ. ಹಿಂದೆ ಬಿಳಿಯರು ತನ್ನ ಆಡಳಿತವನ್ನು ತನ್ನದಾಗಿಸಲು ಒಡೆದು ಆಳು ಎಂಬ ತತ್ವದಿಂದ ಧರ್ಮಗಳ ನಡುವೆ ಗಲಭೆಯನ್ನು ಸೃಷ್ಟಿಸಿ ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಲು ಯತ್ನಿಸಿದರು. ಆದೇ ರೀತಿ ಇಂದು ಭಾರತದ ನಾಯಕತ್ವದ ಚುಕ್ಕಾಣಿಯನ್ನು ಹಿಡಿಯುವ ಕೆಲ ನಾಯಕರು ಹಿಜಾಬ್ ವಿವಾದ, ಮಸೀದಿಯಲ್ಲಿ ಶಿವಲಿಂಗ ಎಂಬ ಸುದ್ದಿಯಿಂದ ಪರಸ್ಪರ ಕೋಮು ಗಲಭೆ ಸೃಷ್ಟಿಸಿ ಧರ್ಮಗಳ ನಡುವಿನ ಬಾಂಧವ್ಯವನ್ನು ಒಡೆಯಲು ಯತ್ನಿಸುತ್ತಿರುವರು, ಇದರ ಪರಿಣಾಮವಾಗಿ ಅನಾಹುತಗಳು ಗಲಭೆಗಳು ದಿನನಿತ್ಯ ನಡೆಯುತ್ತಿದೆ. ಹಿಂದೆ ಬಿಳಿಯರು ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಲು ಒಡೆದು ಆಳು ಎಂಬ ನೀತಿಯನ್ನು ಜಾರಿಗೊಳಿಸಲು ಯತ್ನಿಸಿದಂತೆ ಇಂದು ಭಾರತೀಯ ನಾಯಕರು ಯತ್ನಿಸುತ್ತಿರುವರು. ಅದಲ್ಲದೆ ತಮ್ಮಿಷ್ಟ ಪ್ರಕಾರ ಸಂವಿಧಾನವನ್ನು ತಿರುಚಲು ಪ್ರಯತ್ನಿಸಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವರು. ಹಲವು ಬಗೆಗಿನ ಜಟಿಲ ಸಮಸ್ಯೆಗಳಿಗೆ ಸಂವಿಧಾನಾತ್ಮಕ ಪರಿಹಾರಗಳು ದೊರೆಯುತ್ತದೆಯೋ ಅಂದು ಭಾರತ ಸ್ವಾತಂತ್ರ್ಯೋತ್ಸವಕ್ಕೆ ಪೂರ್ಣ ಪ್ರಮಾಣದ ಮೆರುಗು ಬಂದಂತಾಗಬಹುದು.
ಹಿಂದಿನಂತೆ ಪ್ರೀತಿ, ಸಹಬಾಳ್ವೆ, ಸಹಾನುಭೂತಿ ಯಾವಾಗ ನೆಲಗೊಳ್ಳುತ್ತದೋ ಅಂದೇ ಭಾರತದ ಸ್ವಾತಂತ್ರ್ಯಕ್ಕೊಂದು ಅರ್ಥ, ಜ್ಯಾತ್ಯಾಧಾರಿತ ಬೇಧಭಾವದಿಂದಗಿ ಭಾರತದಲ್ಲಿ. ಹೂಂದಾಣಿಕೆ, ಶಾಂತಿ, ನೀತಿ ಪ್ರೀತಿ ಇವೆಲ್ಲವೂ ಕಣ್ಮರೆಯಾಗಿದೆ. ಇದು ನಿಜಕ್ಕೂ ವಿಷಾದನೀಯ ಒಂದೇ ಸ್ವಾತಂತ್ರ್ಯಕ್ಕಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವವಿಲ್ಲದೆ ಹೆಗಲಿಗೆ ಹೆಗಲು ಕೂಟ್ಟು ಸ್ವಾತಂತ್ರ್ಯವನ್ನೂ ಪಡೆದರು. ಅದೇ ರೀತಿ ನಾವೂ ಒಗ್ಗಟ್ಟಾಗಿ ಇರೋಣ. ಮತ್ಸರ ಅನಾಚಾರ, ಅಕ್ರಮಗಳಿಂದ ದೇಶ ದೀವಾಳಿಯಾಗಬಹುದು. ಆದ್ದರಿಂದ ನಾವೆಲ್ಲರೂ ಸಹೋದರಾಗಿ ಜೀವಿಸಿ ಈ ಸ್ವಾತಂತ್ರ್ಯವನ್ನು ಹೆಮ್ಮೆಯಿಂದ ಆಚರಿಸೋಣ ಜೈ ಹಿಂದ್ ಜೈ ಭಾರತ…..