ವಿಜ್ಞಾನವೆಂದರೆ ಒಂದು ವಸ್ತುವನ್ನು ಜಾಗೃತಿ ಹಾಗೂ ವಿವೇಕದಿಂದ ತಿಳಿಯುವುದಾಗಿದೆ. ಅದು ಹಲವು ಅನುಭವಗಳನ್ನು ಜೀವನದಲ್ಲಿ ಕಲಿಯಲಿಕ್ಕೆ ಅವಕಾಶವನ್ನು ಒದಗಿಸಿ ಕೊಡುತ್ತದೆ. ನಾವು ಕಲಿಕೆಯಿಂದ ಶಕ್ತಿಯಿಂದ ಚುರುಕಾಗುತ್ತೇವೆ. ಸಮಸ್ಯೆಗಳನ್ನು ಹೆಚ್ಚು ಸುಗಮವಾಗಿ ಪರಿಹರಿಸುತ್ತೇವೆ. ಜ್ಞಾನವು ತಾರ್ಕಿಕ ಮತ್ತು ಇತರ ಸಮಸ್ಯಗಳಿಗೆ ಪರಿಹಾರವನ್ನು ನೀಡುತ್ತದೆ. ಹಾಗೂ ನಮ್ಮ ಕೌಶಲ್ಯಗಳನ್ನು ತೀಕ್ಷಗೊಳಿಸುತ್ತದೆ. ಇದು ನಮ್ಮ ದೈನಂದಿನ ದಿನಗಳಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಕಲಿಕೆಯೆಂದರೆ ವ್ಯಾಪಕ ಪರಿಕಲ್ಪನೆ ಹಾಗೂ ಅದಕ್ಕೆ ಕೊನೆ ಹದ್ದು ಕೂಡ ಇಲ್ಲ, ಜ್ಞಾನವನ್ನು ಸ್ವಾಧೀನಪಡಿಸಿಕೊಳ್ಳವುದು, ಎಂದರೆ ಸತ್ಯಗಳನ್ನು ಜ್ಞಾನದ ಮುಖಾಂತರ ಮುಂದೆ ತರುವುದು. ಜ್ಞಾನವನ್ನು ಧನಾತ್ಮಕ ಹಾಗೂ ಋಣಾತ್ಮಕ ಕ್ರಿಯೆಗಳಿಗಾಗಿ ಬಳಸುತ್ತಾರೆ. ಕಲಿತ ಜ್ಞಾನವನ್ನು ಉಪಯೋಗಿಸುವುದು ವೈಯುಕ್ತಿಕ ಪ್ರಗತಿಯನ್ನುಂಟುಮಾಡುತ್ತವದೆ. ಹಾಗೂ ಸಮಾಜ, ರಾಜ್ಯ ರಾಷ್ಟ್ರ, ಇತರ ಕಾರ್ಯಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ಅಕ್ಷರತೆಯೂ ಮುಖ್ಯ.
ಪ್ರಸ್ತುತ ಕಾಲದಲ್ಲಿ ಸಾರ್ವಜನಿಕ ಶಾಲಾ ಕೇಂದ್ರಗಳಲ್ಲಿ ಧರ್ಮದ ಮಹಿಮೆಯನ್ನು ಮುಂದೆ ಸಾಗಿಸಲು ಅವರು ಪ್ರಾರ್ಥನೆಯನ್ನು ನಿರ್ವಹಿಸುತ್ತಾರೆ. ಆದರೆ ಇದು ಸರಿಯಲ್ಲವೆಂದು ಹಲವಾರು ವಿರೋದಾಭಾಸಗಳು ಬಂದಿದೆ. ಅದು ಖಾಸಗಿ ಶಾಲೆಗಳಲ್ಲಾದರೂ ಸರಿ. ಸಾರ್ವಜನಿಕ,ಸರ್ವ ಧರ್ಮೀಯರು ಕಲಿಯುವ ಶಾಲೆಗಳಲ್ಲಿ ಇಂತಹ ಧರ್ಮಪ್ರಾರ್ಥನೆಯನ್ನು ಯಾವುದರ ಮೂಲವಾಗಿ ನಡೆಸುತ್ತಾರೆಂಬ ಪ್ರಶ್ನೆಯು ಇಲ್ಲಿ ಹುಟ್ಟತ್ತದೆ.
ಎಲ್ಲಾ ಧರ್ಮದ ಮಕ್ಕಳು ಪಾಲ್ಗೊಂಡಿರುವ ಸಾರ್ವಜನಿಕ ಶಾಲಾ ಕೇಂದ್ರಗಳು ಹಿಂದೂ ಧರ್ಮದ ಖಾಸಗಿ ಶಾಲೆಯಂತೆ ವರ್ತಿಸುತ್ತಿದೆ. ಬೆಳಿಗ್ಗೆ ಶಾಲೆಗೆ ಬಂದಾಗ ಶಾಲೆಯ ಮುಂಭಾಗದಲ್ಲಿ ಇರುವ ಮೂರ್ತಿ ಪ್ರಾರ್ಥನೆಯನ್ನು ಸಲ್ಲಿಸಲಿಕ್ಕೆ ಕಲ್ಪಿಸುವುದು ಹಾಗೂ ಮುಂತಾದ ಕಾರ್ಯವನ್ನು ಬಲವಂತವಾಗಿ ಮಾಡಿಸುವುದು ಖಂಡನೀಯವಾಗಿದೆ. ಇವು ಸಮಾಜದಲ್ಲಿ ಯಾವುದನ್ನೂ ಲೆಕ್ಕಿಸದೆ ತಮ್ಮ ಧರ್ಮ ದೊಡ್ಡದೆಂದು ಭಾವಿಸುವ,ಶಾಂತಿಯನ್ನು ಕೆಡಿಸುವ ಮತಾಂಧ ಶಕ್ತಿಗಳು ಕಲಿಯುವ ವರ್ಗದಲ್ಲಿಯೂ ಕೋಮುವಾದದ ಪಾಠವನ್ನು ಕಲಿಸುವುದು ಕಂಡು ಬರುತ್ತಿದೆ. ಸಾರ್ವಜನಿಕ ಶಾಲೆಗಳಲ್ಲಿ ಇತರ ಧರ್ಮಕ್ಕೆ ಸಂಬಂಧಿಸಿದ ಪ್ರಾರ್ಥನೆಗಳನ್ನು ಮಾಡಕೂಡದೆಂದು ಸರಕಾರ ಕೂಡ ಸೂಚಿಸಿದೆ.
ಕೆಲವು ಶಾಲಾ ಕೇಂದ್ರಗಳಲ್ಲಿ ನಿರಂತರವಾಗಿ ಶಾಲೆ ಪ್ರಾರಂಭವಾಗುವ ಸಂದರ್ಭದಲ್ಲಿಯೂ, ಊಟಕ್ಕೆ ಮುಂಚಿರುವ ಪ್ರಾರ್ಥನೆಯೂ ಹಾಗೂ ಬಿಡುವಾಗವೂ ಧರ್ಮಗೀತೆಗಳನ್ನು ಹೇಳುವುದರಿಂದ ರಾಷ್ಟ್ರಗೀತೆಯನ್ನು ವಿದ್ಯಾರ್ಥಿಗಳು ಮರೆತು ಬಿಡುವಂತಹ ಸ್ಥಿತಿ. ಧರ್ಮಗೀತೆಗಳ ಬದಲಿಗೆ ರಾಷ್ಟ್ರ ಗೀತೆ ಅಥವಾ ಪ್ಲೆಡ್ಜ್ (ನಾನು ಭಾರತೀಯನು, ಭಾರತೀಯರೆಲ್ಲರೂ ನನ್ನ ಸಹೋದರು, ನಾನು ಭಾರತವನ್ನು ಪ್ರೀತಿಸುತ್ತೇನೆ ಇತ್ಯಾದಿ ಪ್ರಜ್ಞೆ) ಮಾಡುವುದಾದರೆ ವಿದ್ರಾರ್ಥಿಗಳಲ್ಲಿ ದೇಶ ಪ್ರೇಮವೂ ಹುಟ್ಟಬಹುದು.
ನಮ್ಮ ಮುಂದೆ ಈ ಗೀತೆಗಳು ಸವಾಲಾಗಿ ಮುಂದೆ ನಿಂತಿದೆ. – ಹಿಂದೂ ಧರ್ಮದ ತಾತ್ವಿಕ ಗ್ರಂಥಗಳಾದ ಉಪನಿಷತ್ಗಳ ಸರವನ್ನು ಕೇಂದ್ರಿಯ ವಿದ್ಯಾಲಯದಲ್ಲಿ ಕಡ್ಡಾಯ ಪ್ರಾರ್ಥನಾ ಗೀತೆಯಾಗಿ ಮುಂದುವರಿಸಬಹುದೇ ಎಂಬ ಸವಾಲನ್ನು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಕೇಂದ್ರಿಯ ವಿದ್ಯಾಲಯಗಳು ಕೇಂದ್ರ ಸರಕಾರದಿಂದ ಸಂಪೂರ್ಣವಾಗಿ ಧನ ಸಹಾಯ ಪಡೆದ ಶಾಲೆಗಳಿವೆ. ಅದು ಸಂವಿಧಾನದ ಅನುಚ್ಛೇದ 28 (3) ರ ಕೆಳಗೆ ಬರುತ್ತದೆ. ಒಬ್ಬನು ಕೂಡ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಧರ್ಮ ಪ್ರಾರ್ಥನೆಯಲ್ಲಿ ಹಾಜರು ಭಾಗವಹಿಸಬೇಕಾಗಿಲ್ಲ. ಭಾಗವಿಸುವವನು ಅಪ್ರಾಪ್ತ ವಯಸ್ಕನಾಗಿದ್ದರೆ ಅವನ ಪೋಷಕರ ಸಮ್ಮತಿ ಕಡ್ಡಾಯವೆಂದು ಸರಕಾರ ನಿರ್ಧರಿಸಿದೆ.
ಸರಕಾರೀ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಶಿಕ್ಷಕರು ತಾನು ಪ್ರಜಾ ಪ್ರಬುತ್ವ ಹಾಗೂ ಜತ್ಯಾತೀತ ದೇಶದ ಶಾಲಾ ಕೇಂದ್ರದ ಶಿಕ್ಷಕನೆಂದು ಭಾವಿಸಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಹುಟ್ಟಿಸುವ ಕಾರ್ಯವನ್ನು ಮಾಡಲು ಪ್ರಯತ್ನಿಸಬೇಕು.
-Thabsheer Bajpe