ಮುಸ್ಲಿಮರು ಭಾರತದ ಶ್ರೀಮಂತ ಸಾಮಾಜಿಕ ರಚನೆಯ ಅವಿಭಾಜ್ಯ ಅಂಗವಾಗಿದ್ದಾರೆ. ಸರಿಸುಮಾರು 7ನೇ ಶತಮಾನದಲ್ಲಿ ಭಾರತದಲ್ಲಿ ಇಸ್ಲಾಂ ಧರ್ಮವು ಶಾಂತಿ ಸೌಹಾರ್ಧತೆಯ ಸಾರುವರಲ್ಲಿ ಯಶಸ್ವಿಯಾದವು. ಮುಸ್ಲಿಮರು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಹಲವು ಕೊಡುಗೆಗಳನು ನೀಡಿದರು. 7ನೇ ಶತಮಾನದಿಂದ ಪ್ರಾರಂಭವಾಗಿವಾಗಿ 1947ರ ತನಕ ಪರಸ್ಪರ ಸೌಹಾರ್ದತೆಯಿಂದ ಕೂಡಿ ಬಾಳಿದರು.1947ರ ವಿಭಜನೆ ಎಂದು ನಡೆಯಿತೋ ಅಂದಿನಿಂದ ಪ್ರಾರಂಭವಾದ ಕೋಮು ದ್ವೇಷ, ಕೋಮುಗಲಭೆ, ಅಸಹಿಷ್ಣುತೆ ಇಂದಿಗೂ ಕೊನೆಗೊಂಡಿಲ್ಲ ಎಂಬುವುದು ಸತ್ಯ.
ಭಾರತೀಯ ಮುಸ್ಲಿಮರು:-
ಇತಿಹಾಸದಲ್ಲಿ ಭಾರತೀಯ ಮುಸ್ಲಿಮರಿಗೆ ವಿಶೇಷ ಸ್ಥಾನಮಾನವಿದೆ. ದಕ್ಷಿಣ ಭಾರತದಲ್ಲಿ ಆಳಿದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಎಲ್ಲಾ ಧರ್ಮೀಯರನ್ನು ಒಂದೇ ದೃಷ್ಟಿಕೋನದಿಂದ ನೋಡುವಲ್ಲಿ ಯಶಸ್ವಿಯಾದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರಂತರ ಶ್ರಮ ವಹಿಸಿದರು. ಹಲವು ಅಸಾಮಾಜಿಕ ವ್ಯವಸ್ಥೆಯ ಮೇಲೆ ನಿಷೇಧ ಹೇರಿದರು.ತನ್ನ ಕೊನೆಯ ಉಸಿರಿನ ತನಕ ಮೈಸೂರನ್ನು ಆಂಗ್ಲರಿಂದ ಕಾಪಾಡಿದರು. ಟಿಪ್ಪು ಯಾವತ್ತು ಧರ್ಮಕ್ಕಾಗಿ ಹೋರಾಡಲಿಲ್ಲ ಬದಲಾಗಿ ತನ್ನ ದೇಶದ ಹಿತಕ್ಕಾಗಿ ಹೋರಾಟವನ್ನು ನಡೆಸಿದರು.
ಭವ್ಯ ಭಾರತಕ್ಕೆ ಮುಸ್ಲಮರ ಕೊಡುಗೆ
ಉತ್ತರ ಭಾರತವನ್ನಾಳಿದ ದೆಹಲಿ ಸುಲ್ತಾನರು, ಮೊಫಲರು, ನವಾಬರು ಭವ್ಯ ಭಾರತದ ನಿರ್ಮಾಣದಲ್ಲಿ ಕೈ ಜೋಡಿಸಿದರು. ಸಾಂಸ್ಕೃತಿಕ, ಸಾಮಾಜಿಕ, ಕಲಾತ್ಮಕ, ಆರ್ಥಿಕವಾಗಿ ಭಾರತಕ್ಕೆ ಮುಸ್ಲಿಮರ ಕೊಡುಗೆ ಅಪಾರ. ಪ್ರೀತಿಯ ಪ್ರತೀಕವಾದ ತಾಜ್ ಮಹಲ್, ತ್ರಿವರ್ಣ ಧ್ವಜ, ಕೆಂಪು ಕೋಟೆ, ಚಾರ್ ಮಿನಾರ , ವಿಶಾಲವಾದ ಜಾಮಿಯಾ ಮಸೀದಿ, ಗೋಲ್ ಗುಂಬಝ್ ಪಟ್ಟಿ ಮಾಡಿದರೆ ಇನ್ನೂ ಇದೆ. ಮುಸ್ಲಿಮರ ಭವ್ಯ ಕೊಡುಗೆಗೆ ಇವುಗಳು ಉದಾಹರಣೆಗಳಷ್ಟೆ.
ಮುಸ್ಲಿಮರು ಎದುರಿಸುತ್ತಿರುವ ಸವಾಲುಗಳು :-
ತಾರತಮ್ಯ, ಮತ್ತು ಕೀಳರಿಮೆ:- ಮುಸ್ಲಿಮರು ಪ್ರಸ್ತುತ ಭಾರತದಲ್ಲಿ ಹಲವಾರು ರೀತಿಯಿಂದ ತಾರತಮ್ಯ ಮತ್ತು ಶೋಷಣೆಗಳಿಗೆ ಒಳಗಾಗಿದ್ದಾರೆ. ಶಿಕ್ಷಣ, ಸಾಮಾಜಿಕ ಆರ್ಥಿಕತೆ, ಉದ್ಯೋಗ, ಸಂಸ್ಕೃತಿ ಹೀಗೆ ಹಲವಾರು ತರಹದ ತಾರತಮ್ಯಗಳು ಹಲವು ಕ್ಷೇತ್ರದಲ್ಲಿ ಅನುಭವಿಸುವಂತಾಗಿದೆ. ಮುಸ್ಲಿಂ ಜನಾಂಗವನ್ನು ಮೂಲೆಗುಂಪು ಮಾಡಲು ಹಲವು ಪ್ರಯತ್ನಗಳು ಒಂದಾದರ ಮೇಲೊಂದು ನಡೆಯುತ್ತಲೇ ಇದೆ.
ಒಂದು ಗುಂಪನ್ನು ತಾರತಮ್ಯ ಮಾಡುವ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಪ್ರಸ್ತುತ ವರ್ಷಗಳಲ್ಲಿ ನಡೆದಂತಹ ಹಲವು ಘಟನೆಗಳು ಇದಕ್ಕೆ ಸಾಕ್ಷಿ.
ಕೋಮು ಉದ್ವಿಗ್ನತೆ, ಹಿಂಸಾಚಾರ, ದ್ವೇಷ, ತೆಜೋವದೆ, ಕೋಮುಗಲಭೆ ಮತ್ತು ಸಾಮರಸ್ಯ ಕದಡುವಂತಹ ಕಾರ್ಯಗಳು ನಡೆಯುತ್ತಲೇ ಇದೆ. ಮೊದಲೆಲ್ಲ ಅಲ್ಪ ಪ್ರಮಾಣದಲ್ಲಿ ಕಂಡುಬಂದರೆ ಬರುಬರುತ್ತಾ ಪರೋಕ್ಷವಾಗಿ ನಡೆಯುತ್ತಿದೆ. ಅದಕ್ಕೆ ಬೇಕಾದ ರಾಜಕೀಯ, ಸಂಘಶಕ್ತಿ, ಆರ್ಥಿಕ ಶಕ್ತಿಯನ್ನು ಒದಗಿಸುವ ಶಕ್ತಿಗಳು ಇನ್ನೂ ನಮ್ಮ ಸಮಾಜದಲ್ಲಿದ್ದಾರೆ.
ರಾಜಕೀಯ ಪ್ರಾತಿನಿಧ್ಯ:- ಮುಸ್ಲಿಮರು ರಾಜಕೀಯ ಪ್ರಾತಿನಿಧ್ಯ ಗಣನೀಯವಾಗಿ ಇಳಿಕೆಯಾಗುತ್ತಿದೆ. ನಮ್ಮ ಜನಾಂಗದ ಅಹವಾಲುಗಳನ್ನು ಕೇಳುವವರೇ ಇಲ್ಲದಂತಾಗಿದೆ. ನಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ನಿಗ್ರಹಿಸಲು ಯಾರೂ ಇಲ್ಲ ಎಂಬ ಭಾವನೆ ಜನರೆಡೆಯಲ್ಲಿ ಮನೆ ಮಾಡಿದೆ.
ಶಿಕ್ಷಣ:- ಶಿಕ್ಷಣ ಕ್ಷೇತ್ರದಲ್ಲಿ ಇಂದು ಮುಸ್ಲಿಮರು ಪಾಲ್ಗೊಳ್ಳುವಿಕೆ ತೀರ ಕಡಿಮೆಯಾಗಿದೆ. ತಮಗೆ ಬೇಕಾದ ಸಮರ್ಪಕ ಸೌಲಭ್ಯಗಳು, ಮಾರ್ಗದರ್ಶನ, ಆರ್ಥಿಕ ಕೊರತೆ ಹೀಗೆ ಹಲವಾರು ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಶಿಕ್ಷಣ ಕ್ಷೇತ್ರ ಮತ್ತು ಮುಸ್ಲಿಮರೆಡೆಯಲ್ಲಿ ಕಂದಕ ಸೃಶ್ಟಿಸಿದಂತಿದೆ.
ಅಭದ್ರತೆ ಮತ್ತು ಅಸುರಕ್ಷಿತ ಭಾವನೆ:-
ಮುಸ್ಲಿಮರು ಪ್ರಸ್ತುತ ಸನ್ನಿವೇಶದಲ್ಲಿ ಹಲವು ರೀತಿಯ ಅಭದ್ರತೆ ಮತ್ತು ಅಸುರಕ್ಷೆತೆಗೆ ಒಳಗಾಗಿದ್ದಾರೆ. ಭಾರತೀಯ ಸಂವಿಧಾನವು ಎಲ್ಲ ಪ್ರಜೆಗಳಿಗೆ ಒಮ್ಮತ್ತವಾದ ಮತ್ತು ಸಮಾನವಾದ ಹಕ್ಕುಗಳನ್ನು ನೀಡಿ ಗೌರವಿಸಿದೆ ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ಅಸಮರ್ಪಕತೆ ಎದ್ದು ಕಾಣಿಸುತ್ತಿದೆ. ದಿನನಿತ್ಯವೂ ಅಭದ್ರತೆಯಿಂದ ಜೀವಿಸಬೇಕಾದಂತಹ ಪರಿಸ್ಥಿತಿ ಎಂಬಂತಾಗಿದೆ.
ಮುಸ್ಲಿಮರಿಗಿರುವ ಆತಂಕಗಳು:-
ಸುಭದ್ರ,ಶ್ರೀಮಂತ,ಸಾಮಾಜಿಕ,ಆರ್ಥಿಕ ಸಮೃದ್ಧಿಯ ಭಾರತದ ನಿರ್ಮಾಣಕ್ಕಾಗಿ ಮಾಡಲು ಮುಸ್ಲಿಮರ ಕೊಡುಗೆ ಅಪಾರ. ಕಲೆ ಸಾಹಿತ್ಯ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಯತೆಯನ್ನು ಹೊಂದಿದ್ದಾರೆ. 1947ರಲ್ಲಿ ನಡೆದ ವಿಭಜನೆಯಲ್ಲಿ ತಮ್ಮ ತಾಯ್ನಾಡನ್ನು ತೊರೆಯದೆ ಭಾರತದಲ್ಲೇ ಉಳಿದರು. ಎಲ್ಲಾ ಕಷ್ಟ ತ್ಯಾಗ ಬಲಿದಾನಗಳನ್ನು ನೀಡಿ ಭಾರತದ ಸ್ವತಂತ್ರ್ಯ ತಂದು ಕೊಡುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದರು.
ಮುಸ್ಲಿಮರು ಭಾರತದಲ್ಲಿ ಸಮಾನವಾದ ಹಕ್ಕುಗಳನ್ನು ಹೊಂದಲು ಅರ್ಹರಾಗಿದ್ದಾರೆ. ಅವರು ಎಂದಿಗೂ ಕೋಮು ಉದ್ವಿಗ್ನತೆಗೆ ಕುಮ್ಮುಕ್ಕು ನೀಡುವವರಲ್ಲ ಬದಲಾಗಿ ಸಾಮಾಜಿಕ ಸಾಮರಸ್ಯ ಕಾಪಾಡುವುದರಲ್ಲಿ ನಿರತರಾಗಿದ್ದಾರೆ. ರಾಜಕೀಯ ಪ್ರಾತಿನಿಧ್ಯ ಕ್ಷೀಣಿಸುತ್ತಿದೆ. ಇದರ ಬದಲಾಗಿ ಅವರಿಗೆ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಲಭಿಸಬೇಕು, ಮತ್ತು ಆರ್ಥಿಕವಾಗಿ ಬಲಿಷ್ಠರಾಗಬೇಕಿದೆ.
ಭಾರತವೆಂಬುವುದು ಸಾಮರಸ್ಯ ಶ್ರೀಮಂತಿಕೆಯ ನೆಲ. ರಾಷ್ಟ್ರ ಕವಿ ಕುವೆಂಪು ಹಾಡಿದಂತೆ “ಸರ್ವ ಜನಾಂಗದ ಶಾಂತಿಯ ತೋಟ”. ಸರ್ವ ಧರ್ಮೀಯರೂ ಜನಾಂಗದವರೂ ಶಾಂತಿ, ಸಹಬಾಳ್ವೆ, ಸೌಹಾರ್ದತೆಯಿಂದ ಕೂಡಿ ಬಾಳುವ ದೇಶವಾಗಿದೆ.