ಪ್ರಾಚೀನ ಕಾಲದಿಂದ ಪರಂಪರೆಯಾಗಿ ಬಂದಂತಹ ಸಂಸ್ಕಾರ ವರ್ಣ, ಧರ್ಮ ಹಾಗೂ ಜಾತಿಗಳಲ್ಲಿ ಬೇಧಬಾವ ಇಲ್ಲದೆ ಐಕ್ಯತೆಯಿಂದ ಮೆರೆಯುವುದೇ ಈ ಭಾರತ ದೇಶದ ಸಂಕೇತ. ಸೌಹಾರ್ದತೆಯಿಂದ ನಾವು ಜೀವಿಸುತ್ತಿದ್ದೆವು , ನಮ್ಮ ಪೊರ್ವಿಕರು ನಮಗೆ ಸಾರಿದ ಸಂದೇಶ ಭಾರತ ದೇಶದ ಇತಿಹಾಸದ ಪುಟವನ್ನು ನೋಡುವುದಾದರೆ ಶತಮಾನಗಳಿಗೂ ಹಿಂದೆ ವಿವಿಧ ದೇಶಗಳಿಂದ ವ್ಯಾಪಾರಿಗಳು ಆಗಮಿಸುತ್ತಿದ್ದರು , ಅದರಲ್ಲಿ ಪ್ರತ್ಯೇಕವಾಗಿ ಅರಬ್ ದೇಶದ ವ್ಯಾಪಾರಿಗಳು ಇಲ್ಲಿನ ಐಕ್ಯತೆ ಸೌಹಾರ್ಯದತೆಯನ್ನು ನೋಡುತ್ತಿದ್ದರು.
ಅಂದು ಮುಸ್ಲಿಂ ಮತ್ತು ಹಿಂದೂ ಬ್ರಿಟೀಷರ ವಿರುದ್ದ ನಡೆಸಿದ ಸಂಘಟಿತ ಹೋರಾಟದ ಫಲವೇ ನಮಗೆ ಸಿಕ್ಕ ಸ್ವಾತಂತ್ರ್ಯ . ಆದರೆ ಇಂದು ದೇಶ-ಭಕ್ತಿ ಮತ್ತು ‘ಪಾಕಿಸ್ತಾನದ ಕಾರ್ಡ್’ ತೋರಿಸಿ ಕೋಮುವಾದದ ಬೀಜವನ್ನು ಪ್ರಜೆಗಳ ಮನದಲ್ಲಿ ಬಿತ್ತುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವೇನೆಂದರೆ ನಾವು ತಿಳಿದಂತೆಯೇ , ಪ್ರಸ್ತುತ ಭಾರತ ಜನತೆಯೂ ಸರಿಯೇನು ತಪ್ಪೇನೆಂದು ತಿಳಿಯದೆ ಧರ್ಮ ಮತ್ತು ಜಾತಿಗೆ ಅನುಗುಣವಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ನವ ಯುಗದಲ್ಲಿ ಇಂತಹಾ ಪರಿವರ್ತನೆಯಿಂದ ಭಾರತದ ಇತಿಹಾಸದ ಸೌಹಾರ್ದತೆಗೆ ಏಟು ಬೀಳತೊಡಗಿದೆ. ಜನಿಸುವ ಕೂಸಿಗೂ ಕೋಮುವಾದದ ಪಾಠವನ್ನು ಕಲಿಸುತ್ತಿದ್ದಾರೆ. ಯಾತಕ್ಕಾಗಿ ನಾವು ಒಬ್ಬ ಜಾತ್ಯಾತೀತನಾಗಿ ಚಿಂತಿಸುವುದಿಲ್ಲ?.
ಭಾರತ ದೇಶವು ಹಲವು ಧರ್ಮ ಸಂಸ್ಕಾರ ಮತ್ತು ಭಾಷೆಗಳಿಂದ ಒಂದುಗೂಡಿದ್ದಾಗಿದೆ. ಇಲ್ಲಿ ಕೋಮುವಾದವಿಲ್ಲ ಆದರೆ ಇಂದು ಧರ್ಮಗಳ ನಡುವಿನ ವಿದ್ವೇಷಕ್ಕಾಗಿ ಕೋಮುಗಲಭೆಗಳಿಗೆ ಯುವಕರು ಪಾತ್ರರಾಗುತ್ತಾರೆ. ಕಾರಣಗಳಿಲ್ಲದೆ ಇತರರೂಂದಿಗೆ ಜಗಳವಾಡುವ ವಾತಾವರಣ ಉಂಟುಮಾಡುವುದು ಇದೆಲ್ಲವು ಭಾರತದ ಸೌಹಾರ್ದತೆಗೆ ಧಕ್ಕೆ ನೀಡುತ್ತದೆ. ಕೋಮುವಾದ ಅಳಿಸೋಣ, ಕೋಮು ಸೌಹಾರ್ದತೆಯ ಬೆಳೆಸೋಣ…..
-Hafeel Parangipete