ಧರ್ಮ ಶಾಂತಿ ಮತ್ತು ಸಮಾಧಾನದ ಪ್ರತೀಕ, ಆದರೆ ಸಾಮಾಜಿಕ ಜಾಲತಾಣದ ಆಗಮನದ ಬಳಿಕ ಧರ್ಮಗಳು ಗಲಭೆಗಳಿಗೆ ಕಾರಣವಾಗುತ್ತಿದೆ. ಪವಿತ್ರ ಖುರ್ಆನಲ್ಲಿ ವರದಿಯಾದ ಹಾಗೆ ನಿಮಗೆ ನಿಮ್ಮ ಧರ್ಮ ನಮಗೆ ನಮ್ಮದು, ಎಂಬ ವೀಕ್ಷಣೆಯಲ್ಲಿ ನಡೆದರೆ ವಿಶ್ವದೆಲ್ಲೆಡೆ ಶಾಂತಿ ಹರಡಲು ಸಾಧ್ಯವಾಗಬಹುದು.
ಶೇಕಡ 90% ರಷ್ಟು ಕ್ರಿಶ್ಚನ್ ಜನಸಖ್ಯೆ ಹೊಂದಿರುವ ಯೂರೋಪ್ ರಾಷ್ಟ್ರಗಳಲ್ಲಿಯ ಧರ್ಮಗಳ ನಡುವೆ ಗಲಭೆಗಳು ನಡೆಯುತ್ತಿವೆ. ಧರ್ಮಗಳ ಒಳಗಿನ ತೊಂದರೆಗಳಿಗೂ, ಗಲಭೆಗಳಿಗೂ ಪರಿಹಾರ ಏನೆಂದು ನೋಡುವುದಾದರೆ, ಧಾರ್ಮಿಕ ಪಂಡಿತರು ರಾಜಕೀಯ ಮತ್ತು ಸಂಪತ್ತುಗಳ ಹಿಂದೆ ನಡೆಯುತ್ತಿರುವವರು, ಪ್ರಸ್ತುತ ಆನ್ಲೈನ್ ಮುಖಾತರ ವದಂತಿ ಸುದ್ದಿಗಳು ಹೊರುತ್ತಿವೆ. ಇವುಗಳಿಗೆಲ್ಲ ಕಡಿವಾಣ ಹಾಕಿದರೆ ಧರ್ಮಗಳ ನಡುವಿನ ತೊಂದರೆಗಳಿಗೆ ಪರಿಹಾರವಾಗಬಹುದು.
ಕವಿ ಅಸದುಲ್ಲಾ ಬೇಗ ನಾನು-ನೀವು ಎಂಬ ಪ್ರಸ್ತುತ ಕವಿತೆಯಲ್ಲಿ ಹೇಳಿರುವುದು – ಧರ್ಮಗಳು ಎಷ್ಟೇ ಉತ್ತಮವಾದರೂ- ನಾಯಿ ಬಲ ಡೊಂಕೇ – ಎಂಬಂತೆ ಅದರಲ್ಲಿ ನಿರಂತರ ಗಲಭೆಗಳು ನಡೆಯುತ್ತಲೇ ಇರುತ್ತದೆ. ಸರ್ವ ಧರ್ಮಗಳು ಒಳಿತನ್ನೇ ಕಲ್ಪಿಸುತ್ತದೆ. ಹಿಂಸೆ, ಕೊಲೆ, ಅತ್ಯಾಚಾರ ಮುಂತಾದ ನೀಚ ಅನಾಚರಗಳಿಂದ ಧರ್ಮಗಳು ತಡೆಹಿಡಿದಿದ್ದರೂ ಧರ್ಮಗಳ ನಡುವೆ ಇಂತಹಾ ಗಲಭೆ ಹಿಂಸಾಚಾರಗಳು ನಡೆಯುವುದು ಹೇಗೆ ಎಂಬುವುದು ಚಿಂತಿಸಬೇಕಾಗಿದೆ. ಇದರ ಬಗ್ಗೆ ವೀಕ್ಷಿಸುವುದಾದರೆ ಧರ್ಮಗಳು ಗಲಭೆ ಗಳಿಗೆ ಪ್ರತ್ಸಾಹಿಸುವುತ್ತಿಲ್ಲ ಹೊರತು ಧರ್ಮಗಳಲ್ಲಿರುವ ಕೆಲವು ಜನರೇ ಇಂತಹ ಗಲಭೆಗಳಿಗೆ ಪಾತ್ರರಾಗುತ್ತಾರೆ. ಧರ್ಮಗಳಲ್ಲಿನ ಕೆಲ ಜಾತಿಗಳೇ ತೊಂದರೆಗಳ ಮುಂಚೂಣಿಯಲ್ಲಿ ನಿಲ್ಲುತ್ತಿದೆ. ಆಧುನಿಕ ಅವಸ್ಥೆಗಳೇ ಇದಕ್ಕೆ ಮೂಲ ಕಾರಣವಾಗಿರುತ್ತದೆ ಹೊರತು ಧರ್ಮಗಳು ಇಂತಹಾ ಗಲಭೆಗಳಿಗೆ ಪ್ರೋತ್ಸಾಹಿಸುವುದಿಲ್ಲ, ಇದಕ್ಕೆ ಧರ್ಮಗಳು ಕಾರಣವಾಗಿಲ್ಲ.
Raza Kalladka