ಇಲ್ಲಿ
ವಿದ್ಯಾವಂತರಾಗಿ ಜೀವನದಲ್ಲಿ ಯಶಸ್ಸನ್ನು ಪಡೆಯುವವರು ಅಧಿಕರು. ವಿದ್ಯಾವಂತರಲ್ಲೂ ಹಲವರಲ್ಲೂ
ಹಲವರು ತಮ್ಮ ವಿದ್ಯೆಯನ್ನು ಬೆರೆಯವರಿಗೆ ಕೊಡುವುದರಲ್ಲಿ ವಿಫಲವಾಗಿದ್ದಾರೆ. ಆದರೆ ಒಬ್ಬ ಮಹಾನ್
ವ್ಯಕ್ತಿ ತಾನು ವಿದ್ಯೆ ಕಲಿಯದಿದ್ದರೂ ನನ್ನ ಮುಂದಿನ ಸಮಾಜವು ಅನಕ್ಷರಸ್ತರು ಆಗಬಾರದೆಂದು
ಕಿತ್ತಳೆ ಹಣ್ಣುಗಳನ್ನು ಮಾರಿ, ಅದರಿಂದ ಗಳಿಸಿದ ಹಣದಿಂದ ಶಾಲೆಯನ್ನು ಕಟ್ಟಲು ಬುನಾದಿಯನ್ನು
ಹಾಕುತ್ತಾರೆ ಹಾಜಬ್ಬರವರು.
ದೇಶದ
ಪ್ರಶಸ್ತಿಗಳಲ್ಲಿ ನಾಲ್ಕನೇ ಸ್ದಾನ ಪಡೆದ ಪದ್ಮಶ್ರೀ ಪ್ರಶಸ್ತಿಯು ಅಕ್ಷರ ಸಂತ ಹರೇಕಳ
ಹಾಜಬ್ಬರಿಗೆ ಪುರಸ್ಕೃತವಾಗಿದ್ದಾರೆ. ಬಾಲ್ಯದಿಂದಲೇ ಬಡತನವಿರೂದರಿಂದ ವಿದ್ಯಾಭ್ಯಾಸ ಮೆಟ್ಟಿಲಿಂದ
ದೂರವಿದ್ದರು. ಬಡತನವಿರೂದರಿಂದ ಇವರು ಸಣ್ಣ ಪ್ರಾಯದಿಂದಲೇ ದುಡಿಮೆಯನ್ನು ಹಿಂಬಾಲಿಸಿ ಜೀವನವನ್ನು
ಮುಂದೆ ಸಾಗಿಸಿದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರು ಕೆಲ ವರ್ಷಗಳ ಹಿಂದೆ ಮಂಗಳೂರಿನ
ಸಾರ್ವಜನಿಕ ಪ್ರದೇಶಗಳಲ್ಲಿ ಕೇವಲ ಕಿತ್ತಲೆ ಹಣ್ಣುಗಳನ್ನು ಮಾರಿ ಬದುಕುತ್ತಿದ್ದರು. ಇವರು
ವಿದ್ಯಾವಂತರಲ್ಲ ಆದರೆ ಮುಂದಿನ ಪೀಳಿಗೆ ವಿದ್ಯಾಭ್ಯಾಸ ಪಡೆಯದವರಾಗಬಾರದೆಂಬ ಉದ್ದೇಶವನ್ನಿಟುಕೊಂಡಿದ್ದರು.
ಹಾಜಬ್ಬರ ವಾಸಸ್ಧಳ ಪ್ರದೇಶದಿಂದ ಶಾಲಾ
ಸಂಸ್ಧೆಗೆ ಸುಮಾರು ಮೂರು ಕಿ.ಮೀ. ಅಂತರವಿತ್ತು.
ವಿದ್ಯಾರ್ಥಿಗಳು ಕ್ಲಿಪ್ತ ಸಮಯಕ್ಕೆ ಶಾಲೆಯಲ್ಲಿ ಹಾಜರಾಗಲು ಕಷ್ಟವಾಗುತ್ತಿತ್ತು, ಇದನ್ನೆಲ್ಲಾ
ಅರ್ಥಮಾಡಿಕೊಂಡು ಸಮಾಜ ಸೇವಕ ಹಾಜಬ್ಬರವರು ಯುವ ಜನಾಂಗವು ವಿದ್ಯಾವಂತರಾಗಬೇಕು ಎಂಬ
ಸದುದ್ದೇಶದಿಂದ ಹತ್ತಿರ ಸ್ಥಳದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯನ್ನು ನಿರ್ಮಿಸುತ್ತಾರೆ ಪ್ರಸ್ತುತ
ಪ್ರೌಡಾ ಸಂಸ್ಥೆಯಾಗಿ ಮಾರ್ಪಟ್ಟಿದೆ. ತನ್ನ ಕನಸು ಸಫಲವಾಯಿತ್ತು ವಿದ್ಯಾರ್ಥಿಗಳು ಅಭಿವೃದ್ದಿ
ಯಾದರು.
ಕೇಂದ್ರ ಸರಕಾರದಿಂದ ಪ್ರತೀ ವರ್ಷ ಸಾದಕರಿಗೆ
ಪ್ರಶಸ್ತಿ ನೀಡುವುದರ ಪೈಕಿ ಬಡ ಕುಟುಂಬದಲ್ಲಿ ಬೆಳೆದ ಸಾದಕ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ರಾಷ್ಟ್ರಪತಿಯರಿಂದ
ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು. ಬಳಿಕ ತನ್ನ ವಿದ್ಯಾಸಂಸ್ಥೆಯು ಪದವಿ ಪೂರ್ವ
ಸಂಸ್ಥೆಯಾಗಿ ಮಾರ್ಪಡಿಸಲು ಸರಕಾರದೂಂದಿಗೆ ಕೋರಿದರು. ಗೌರವ ಪ್ರಶಸ್ತಿಗಳು ಹಲವು ಪಡೆದಿದ್ದರೂ
ತನ್ನ ವಿದ್ಯಾಸಂಸ್ಥೆ ಉನ್ನತ ಶ್ರೇಣಿಯತ್ತ
ತಲುಪಲೀ ಎಂದೇ ಹಾಜಬ್ಬರು ಬಯಸುತ್ತಾರೆ… ಇವರ ಜೀವನವು ಸಮಾಜಕ್ಕೆ ಮಾರ್ಗದರ್ಶವಾಗಿದೆ.
— Author —