ಕೊರೊನಾದಿಂದ ಭಾರತದಲ್ಲಿ ಬಹುತೇಕ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಘಟಕಗಳು, ಸಾರಿಗೆ ವ್ಯವಸ್ಥೆಗಳು, ಶಾಲಾ ಕಾಲೇಜುಗಳು ಸಹ ಸರ್ಕಾರಿ ಕಚೇರಿಗಳು ಲಾಕ್ಡೌನ್ನಲ್ಲಿದ್ದು ಇದರ ಪರಿಣಾಮ ಕೈಗಾರಿಕೆಗಳಿಗೆ ಬೀರಿದೆ.
ಮೇ 2021 ರ ಅಂತ್ಯದ ವೇಳೆಗೆ ನಿರುದ್ಯೋಗ ಸುಮಾರು 12% ವರೆಗೆಯಿದ್ದು, 1 ಕೋಟಿ ಜನರು ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ಕಳೆದ ವರ್ಷ ಕೊರೊನಾದ ದಾಳಿಯಿಂದ 97% ಕುಟುಂಬಗಳ ಆರ್ಥಿಕತೆ ಕುಸಿದಿದೆ. 2 ನೇ ಅಲೆಯ ಸಮಯದಲ್ಲಿ, ಉದ್ಯೋಗದ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿದೆ.
ಕೊರೊನಾದ 1 ನೇ ತರಂಗವು 23 ಕೋಟಿ ಜನರನ್ನು ಬಡತನ ರೇಖೆಗಿಂತ ಕೆಳಗೆ ತಳ್ಳಿದೆ. ಕಳೆದ ಒಂದು ಸಾಂಕ್ರಾಮಿಕ ವರ್ಷದಲ್ಲಿ ಗ್ರಾಮೀಣ ಹಾಗೂ ನಗರದಲ್ಲೂ ಬಡತನದ ಹವೆ ಎರಡುಪಟ್ಟು ಏರಿಕೆಯಾಗಿದೆ.
ವೇತನ ಕಡಿತ, ಉದ್ಯೋಗ ನಷ್ಟಗಳ ಜೊತೆಗೆ ಈಗ ಅಗತ್ಯ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ.
ತೈಲ, ಚಹಾ, ಬೇಳೆಕಾಳುಗಳು ಮತ್ತು ಈರುಳ್ಳಿಯಂತಹ ದಿನಬಳಕೆ ವಸ್ತುಗಳ ಸರಾಸರಿ ಚಿಲ್ಲರೆ ಬೆಲೆಗಳು ದುಬಾರಿಯಾಗಿದೆ. ಮಧ್ಯಮವರ್ಗದ ಜನತೆ ತಮ್ಮ ದೈನಂದಿನ ವಸ್ತುಗಳನ್ನು ಕೊಳ್ಳಲೂ ಹರಸಾಹಸಪಡುತ್ತಿದ್ದಾರೆ. ಜನರ ಆದಾಯದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲವಾದರೂ, ಖರ್ಚು ವೆಚ್ಚಗಳು ಹೆಚ್ಚುತ್ತಿವೆ. ಸಾಮಾನ್ಯ ಮನೆಯ ವೆಚ್ಚ ದುಬಾರಿಯಾಗಿದೆ. ವಿದ್ಯುತ್ ಬೆಲೆ ಸುಮಾರು ಮೂರುಪಟ್ಟು ಹೆಚ್ಚಾಗಿದೆ. ಉಳಿತಾಯಖಾತೆಯಲ್ಲೂ ಏನೂ ಇಲ್ಲ.
ದಿನಸಿ, ಇಂಧನ ಮತ್ತು ಕೈಗಾರಿಕಾ ಸರಕುಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ದುಬಾರಿಯಾಗುತ್ತಿವೆ, ಅಸುರಕ್ಷಿತ ಸಾಲಗಳು ಹೆಚ್ಚಾಗುತ್ತಿದ್ದು, ಸಾಮಾನ್ಯ ಜನರ ಪರಿಸ್ಥಿತಿ ಆರ್ಥಿಕ ಬಿಕ್ಕಟ್ಟಿನಿಂದ ಅತಂತ್ರವಾಗಿದೆ . ನಿಧಿ ಖಾತೆಗಳಲ್ಲಿ ಉದ್ದೇಶಗಳಿಂದ ತೆಗೆದಿಟ್ಟ ಹಣದಿಂದ ಖರ್ಚುಮಾಡುವ ಸ್ಥಿತಿ ಮುಟ್ಟಿದೆ. ಶ್ರೀಮಂತ ವರ್ಗ ಇನ್ನೂ ಶ್ರೀಮಂತರಾಗುತ್ತಿದ್ದಾರೆ.
— Author —