Source: Pixabay.com | Image By:jplenio |
ಗಾಳಿಯ ಒತ್ತಡ, ಚಂಡಮಾರುತ, ಭಾರೀ ಮಳೆ ಹಾಗೂ ಗುಡುಗುಗಳಿಂದ ವರ್ಷಂಪ್ರತಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಲೇ ಇದೆ. ಭಾರತದ ಭೌಗೋಳಿಕ ಪ್ರತ್ಯೇಕತೆಗೆ ಹೊಂದಿಕೊಂಡು ಪ್ರಾಕೃತಿಕ ವಿಕೋಪಗಳು ಉಂಟಾಗುವುದು ಸಹಜ. ಹಿಮಕರಗುವಿಕೆನ ನದಿ ಉಕ್ಕಿಹರಿಯುವುದು ವಾಯುಭಾರ ಕುಸಿತದಿಂದ ಉಂಟಾಗುವ ಮಳೆಯ ವೇಳೆ ದುರಂತಗಳು ಸಹಜವಾಗಿ ಉಂಟಾಗುತ್ತದೆ. ಭಾರತದ ಕೆಲವೊಂದು ರಾಜ್ಯಗಳಲ್ಲಿ ಅತೀ ಹೆಚ್ಚು ದುರಂತ ಉಂಟಾಗುತ್ತದೆ. ಕೇರಳ ಹಾಗೂ ಬಿಹಾರ ರಾಜ್ಯಗಳಲ್ಲಿ ಉಕ್ಕಿ ಹರಿಯುವ ನದಿ ಹಾಗೂ ಭಾರೀ ಮಳೆಯ ಪ್ರಭಾವದಿಂದ ವರ್ಷಕೊಮ್ಮೆ ಪ್ರಾಕೃತಿಕ ವಿಕೋಪಗಳು ಸಂಭವಿಸುವುದು ಸಹಜವಾಗಿ ಬಿಟ್ಟಿದೆ. ಇದರಿಂದ ಮುಕ್ತಿಯಾಗಲು ಸೂಕ್ತವಾದ ಪರಿಹಾರವೇನು.. 2020.21 ನೇ ಸಾಲಿನ ಪ್ರಕಾರ ಒಂದು ಭೂಕಂಪದಿಂದ ಸರಿ ಸುಮಾರು 75 ಶತಕೋಟಿ ಡಾಲರಿನಷ್ಟು ನಷ್ಟ ಸಂಭವಿಸಬಹುದೆಂದು ಸಂಶೋಧನೆಯಿಂದ ವ್ಯಕ್ತವಾಗಿದೆ. ಇದರ ಹಿಂದಿರುವ ಮುಖ್ಯ ಕಾರಣ ಹಾಗೂ ಪರಿಹಾರವೇನೆಂದು ತಿಳಿಯೋಣ..
ನೈಸರ್ಗಿಕ ವಿಕೋಪಗಳಿಗೆ ಕಾರಣ ಮತ್ತು ಪರಿಹಾರ
ಜಾಗತಿಕ ತಾಪಮಾನ
ಸಾಗರದ ತಾಪಮಾನದಲ್ಲಿ ಹೆಚ್ಚಳಕ್ಕೆ ಬಲವಾದ ಚಂಡಮಾರುತ, ಉಷ್ಣವಲಯದ ಬಿರುಗಾಳಿ ಹಾಗೂ ಮಾನವರು ನಿರ್ಮಿಸಿದ ಕಾರ್ಖಾನೆಗಳಿಂದ ಜಾಗತಿಕ ತಾಪಮಾನ ಉಂಟಾಗಬಹುದು. ಇದನ್ನು ತಡೆಗಟ್ಟಲು ಮನುಷ್ಯರು ಸಸ್ಯಗಳನ್ನು ನೆಡುವುದು ಅತ್ಯಗತ್ಯ. ಚಂದ್ರನ ಪ್ರಕ್ರಿಯೆವೂ ಭೂಕಂಪಗಳನ್ನುಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆಯೆಂದು ಕೆಲವು ಸಂಶೋಧಕರು ಪ್ರಾಸ್ತಾಪಿಸಿದ್ದಾರೆ.
ಗಣಿಗಾರಿಕೆ
ಗಣಿಗಾರಿಕೆಯಿಂದ ಮಣ್ಣಿನ ಸವೆತ ಹಾಗೂ ಪರ್ವತಗಳ ಅಸಮರ್ಪಕತೆಯ ಕಾರಣದಿಂದ, ಮಳೆಯಿಂದ ಉಂಟಾಗುವ ಹಠಾತ್ ಪ್ರವಾಹದ ಮೂಲಕ ಭೂಕುಸಿತಗಳು ಉಂಟಾಗುತ್ತದೆ. ಗಣಿಗಾರಿಕೆಯಿಂದ ಭೂಕಂಪನಗಳು ಉಂಟಾಗಬಹುದು. ಕಾರಣ ಮಾನವರು ಭೂಮಿಯಿಂದ ಬೆಲೆಬಾಳುವ ಖನಿಜಗಳನ್ನು ಜನರು ವಶಪಡಿಸುತ್ತಿದ್ದಾರೆ. ಇದನ್ನು ಸಾಧ್ಯವಾದಷ್ಟು ತ್ಯಜಿಸುವುದು ಅತ್ಯಗತ್ಯ.
ಅರಣ್ಯನಾಶ
ಜೀವನದ ಸುಖಾಡಂಭರಕ್ಕಾಗಿ ಪ್ರಕೃತಿಯ ಅಮೂಲ್ಯ ವಸ್ತುಗಳಾದ ಗಿಡಮರಗಳನ್ನು ನಾಶ ಮಾಡಿ ಗಲ್ಲಿಗಲ್ಲಿಗಳಲ್ಲೂ ಕಾರ್ಖಾನೆಗಳ ಹಾಗೂ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಗಿಡಮರಗಳಲ್ಲಿರುವ ವೈವಿಧ್ಯಮಯದ ಅನುಕೂಲಗಳು, ನೈಸರ್ಗಿಕ ಸಂಪನ್ಮೂಲಗಳ ಮೂಲವಾದ … ಕಾಡನ್ನು ಬೆಳೆಸಿ ನಾಡನ್ನು ಉಳಿಸಿ… ಎಂಬ ಗಾದೆಯನ್ನೇ ಮರೆತು ಬಿಟ್ಟಿದ್ದಾರೆ.
ಮಣ್ಣಿನ ಸವೆತ
ಮಣ್ಣಿನ ಸವೆತವೂ ಭೂ ಕುಸಿತಕ್ಕೆ ಮುಖ್ಯ ಕಾರಣವಾಗಿದೆ. ಇದು ಪ್ರಕೃತಿಗೆ ಮತ್ತು ಮನುಷ್ಯ ವರ್ಗಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಮಣ್ಣಿನ ಫಲವತ್ತತೆ ಅನರ್ಘ್ಯ, ಹೊರತು ಮಣ್ಣಿನ ಸವೆತ ಉಂಟಾದರೆ ಭೂಕಂಪಗಳು ಆಗುವುದು ಸಹಜ. ಇದರಿಂದ ಸಾವಿರಾರು ಮನೆಗಳು ಕೃಷಿಗಳು ನಾಶವಾಗುತ್ತದೆ.
ಪ್ರಾಕೃತಿಕ ವಿಕೋಪಗಳಿಂದ ನಷ್ಟ ಕೇವಲ ಒಂದು ಕುಟುಂಬ ಅಥವಾ ರಾಜ್ಯಕ್ಕಲ್ಲ, ಹೊರತು ಒಂದು ದೇಶದ ಆರ್ಥಿಕತೆಗೆ ಹೊರೆಯಾಗುತ್ತದೆ.ಮುಂದಿನ ನಿಮಿಷ ಅಂತ್ಯದಿನ ವೆಂದರಿತು ಕೈಯಲ್ಲೊಂದು ಬೀಜ ಅಥವಾ ಮೊಳಕೆಯಿದ್ದಲ್ಲಿ ಅವನು ಅದನ್ನು ನೆಡಲಿ ಎಂಬ ಪ್ರವಾದಿ ವಚನವನ್ನು ಇಮಾಮ್ ಅಹ್ಮದ್ (ರ) ರವರು ಉಲ್ಲೇಖಿಸಿದ್ದಾರೆ. ಭವಿಷ್ಯದಲ್ಲುಂಟಾಗುವ ಪ್ರಕೃತಿ ವಿಕೋಪಗಳಿಂದ ತಡೆಗಟ್ಟಲು ಇಂದೇ ಮುನ್ನೆಚ್ಚರಿಕೆವನ್ನು ನಡೆಸಲು ಅಲ್ಲಾಹು ತೌಫೀಕ್ ನೀಡಲಿ.. ಆಮೀನ್
intellectual…
Quite informative