ಕಣ್ಣಿನ ನೋಟಕ್ಕೆ ಕಾಣುವ
ಜಗತ್ತು ಆಕರ್ಷಿತ ಅದರಲ್ಲೂ ಹಸಿರಿನ ಸಿರಿಯೊಂದಿಗೆ ಪ್ರಕೃತಿಯನ್ನು ಅಲಂಕರಿಸಿದ ಸಸ್ಯಗಳು, ಹೂಬಳ್ಳಿಗಳು ಹಾಗೂ ಮರಗಳು ವಿಶೇಷವಾದದ್ದು.
ಮನುಷ್ಯ ಪ್ರಾಣಿಗಳಿಂದ ಹಿಡಿದು
ಎಲ್ಲಾ ಜೀವಿಗಳು ಪೃಕೃತಿಯ ಸಸ್ಯಗಳಿಗೆ ಅವಲಂಬಿತವಾಗಿದೆ. ಮಖ್ಯವಾಗಿ ಮಾನವ ಕುಲ ಪುರಾತನ ಕಾಲದಿಂದಲೇ
ಸೊಪ್ಪು ಬಗೆಗಳನ್ನು ಆಹಾರವಾಗಿ ಸೇವಿಸುತ್ತಿದ್ದರು, ಹಸಿರು
ಸಸ್ಯಗಳ ಪ್ರಧಾನ್ಯತೆಯನ್ನು ಅರಿತಿದ್ದರು. ಕಾಲ ಕ್ರಮೇಣ ಮಾನವ ಯಂತ್ರಗಳನ್ನು ಉಪಯೋಗಿಸತೊಡಗಿದನು, ಸಸ್ಯಗಳನ್ನು ದೈನಂದಿನ ಉಪಯೋಗಿಸುತ್ತಿದ್ದರೂ ಅದರ
ಪ್ರಾಮುಖ್ಯತೆಯನ್ನು ಅರಿಯದೇ ಉಳಿದ. ಮಾರು ಕಟ್ಟೆಯಲ್ಲಿ ತರಕಾರಿ, ಹಣ್ಣುಗಳನ್ನು ಖರೀದಿಸಲು ಹೋದಾಗ ದುಬಾರಿ ಬೆಲೆಯನ್ನು
ಕಂಡು ತಮ್ಮ ಆಸೆಯನ್ನು ಕಳೆಯುತ್ತಾರೆ.
ಸಸ್ಯಗಳಿಂದ ಬರೀ ಆಹಾರವಲ್ಲದೆ
ಹಲವಾರು ನಿಗೂಢವಾದ ಉಪಯೋಗಗಳಿವೆ,
ವಿದ್ಯಾರ್ಥಿಗಳು
ಶಾಲಾ ಕಾಲೇಜುಗಳಲ್ಲಿ ಓದು ಕಲಿತು ವಿದ್ಯಾವಂತರಾಗಲು ಪುಸ್ತಕದ ಅವಶ್ಯಕತೆ ಇದೆ, ಆ ಪುಸ್ತಕದ ಮೂಲ ಯಾವುದೆಂದು ಅರಿಯುವವರು ಬಹಳ ವಿರಳ, ಮರಗಳನ್ನು ಕಡಿದು, ಅದರಿಂದ ಪುಸ್ತಕದ ಪುಟಗಳನ್ನು ತಯಾರಿಸುವರು. ಮಾನವ
ಹೊರಬಿಡುವ ಕಾರ್ಬನ್ ಡೈಆಕ್ಸೈಡನ್ನು ಸಸ್ಯಗಳು ತಮ್ಮ ಆಹಾರವನ್ನಾಗಿಸಿ ಅದರಿಂದ ಆಮ್ಲಜನಕವನ್ನು
ಹೊರಬಿಡುತ್ತದೆ. ಇದರಿಂದ ಮಾನವ ಉಳಿದಿದ್ದಾನೆ. ಇದು ಎಲ್ಲರೂ ಅರಿತಿರುವ ವಿಷಯವೇ ಸರಿ, ಆದರೆ ಯಾರು ಇದನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ
ಎಂಬುವುದೇ ಬೇಸರವಾದದ್ದು.
ಸಸ್ಯಗಳು ಇತರ ಮೂಲ ಆಹಾರಕಳ
ಪೈಕಿ ಮುಖ್ಯವಾದದ್ದು. ಹೆಚ್ಚಿನ ಜೀವಿಗಳು ಸಸ್ಯಗಳನ್ನು ತಿಂದು ಬದುಕುವುದೇ ಅದಕ್ಕೆ ಮುಖ್ಯಕಾರಣ.
ನಮ್ಮ ಪೂರ್ವಜರು ಗಾಯ ಆದರೆ ಪೃಕೃತಿಗಳಲ್ಲಿ ಸಿಗುವ ಸಸ್ಯಗಳನ್ನು ತೆಗೆದು ಅದನ್ನು ಔಷಧಿಯಾಗಿ
ಉಪಯೋಗಿಸುತ್ತಿದ್ದರು.
ಈಗಲೂ ಹೆಚ್ಚಿನ ಜನರು
ಆಸ್ಪತ್ರೆಯಲ್ಲಿ ಸಿಗುವ ಮಾತ್ರೆ ಔಷಧಿಗಳನ್ನಲ್ಲದೆ ಪ್ರಕೃತಿಯ ಸಸ್ಯಗಳಿಂದ ತಾಯರಿಸಲಾದ ಔಷಧಿಯತ್ತ
ಮುಖಮಾಡಿದ್ದಾರೆ. ಸಸ್ಯಗಳು ಮಾನವ ಜೀವನಕ್ಕೆ ಅತ್ಯಗತ್ಯ, ಇದು
ಮಾತ್ರವಲ್ಲದೆ ಎಲೆಗಳು ಅಥವಾ ಮರದ ಶಾಖೆಗಳಿಂದ ಬರುವ ಎಣ್ಣೆಯನ್ನು ದಿನಬಳಕೆಯ ಅನೇಕ
ಉತ್ಪನ್ನಗಳನ್ನು ಉತ್ಪದಿಸಲಾಗುತ್ತಿದೆ.
ಈ ಸಸ್ಯರಾಶಿಗಳಿಗೆ ಇಸ್ಲಾಂ ಕೊಟ್ಟ ಗೌರವ
ಅಷ್ಟಿಷ್ಟಲ್ಲ.ಪ್ರವಾದಿ ಮುಹಮ್ಮದ್ (ಸ) ಪ್ರಾಣಿ ಪಕ್ಷಿಗಳಿಗಳಿಗಲ್ಲದೆ ಇತರ ಜೀವರಾಶಿಗಳಿಗೂ ಗೌರವ
ಕೊಟ್ಟಿದ್ದಾರೆ. ಪ್ರವಾದಿಯವರು ನುಡಿಯುತ್ತಾರೆ: ಯಾರಾದರೂ ಒಂದು ಮರವನ್ನ ನೆಟ್ಟು,ಅಥವಾ ಬೀಜಗಳನ್ನ ಬಿತ್ತಿ ನಂತರ ಪಕ್ಷಿ, ಅಥವಾ ಪ್ರಾಣಿ ಅದರಿಂದ ತಿಂದರೆ ನಂತರ ಅವನಿಂದ ಅದು
ದಾನ ಅಥವಾ ಉಡುಗೊರೆಯಾಗಿ ಪರಿಗಣಿಸಲಾಗುತ್ತದೆ. ಸರಳವಾಗಿ ಬದುಕಲು, ಪ್ರಾಣಿ ಮತ್ತು ಸಸ್ಯ ಜೀವಗಳನ್ನು ರಕ್ಷಿಸಲು ಹಾಗೂ
ಜನರೊಡನೆ ಕರುಣೆ ತೋರುವ ಮೂಲಕ ಅಲ್ಲಾಹನನ್ನು ಆರಾಧಿಸಲು ಪ್ರವಾದಿಯವರು ಕಲಿಸಿದ್ದಾರೆ. ಭೂಮಿ
ಹಾಗೂ ಅದರ ಸಂಪನ್ಮೂಲಗಳ ಬಗ್ಗೆ ಕಾಳಜಿ ವಹಿಸುವದರ ಬಗ್ಗೆ ಪ್ರವಾದಿಯವರು ಹೆಚ್ಚಿನ ಪ್ರೋತ್ಸಾಹ
ನೀಡಿದ್ದಾರೆ.
ಸಸ್ಯಗಳ ಬೆಳವಣಿಗೆಯು ಮಣ್ಣಿನ
ಫಲವತ್ತತೆಯ ಮೇಲೆ ನೆಲೆನಿಂತಿದೆ. ಆದ್ದರಿಂದ ನಾವು ಸಸ್ಯಗಳನ್ನು ನೆಟ್ಟು ಬೆಳಸಬೇಕು, ಪ್ರತೀ ಮನೆಯಲ್ಲಿ ಪ್ರತೀ ಮಗುವಿಗನುಸಾರವಾಗಿ
ಮರಗಳನ್ನು ನೆಡುವುದು ಅನಿವಾರ್ಯವಾಗಿದೆ. ಇದು ಮುಂದಿನ ಯುವಜನಾಂಗಜದ ಪ್ರಗತಿಗೆ ಮುಖ್ಯ
ಕಾರಣವಾಗಬಹುದು.
— Author —