ಪ್ರಸ್ತುತ ಸನ್ನಿವೇಶದಲ್ಲಿ ಹಿಂಸಾಚಾರ ಎಲ್ಲೆಡೆ ಹರಡಿರುವಾಗ ಅದನ್ನು ದೇಶದದಿಂದ ತೊಲಗಿಸುವುದು ನಮ್ಮ ಕರ್ತವ್ಯ. ಭಾರತವು ಸರ್ವ ಧರ್ಮ, ಸಂಸ್ಕೃತಿ ಹಾಗೂ ವಿವಿಧ ಜಾತಿ–ಮತಗಳ ನೆಲೆಬೀಡು. ದೇಶದಲ್ಲಿ ಎಲ್ಲರೂ ಸಮಾನವಾದ ಜೀವನ ಜೀವಿಸಲು ಅರ್ಹರಾಗಿದ್ದಾರೆ. ಆದರೆ ಹಿಂಸಾಚಾರ, ಕೋಮುಗಲಭೆ, ತಾರತಮ್ಯ ಹೀಗೆ ಹಲವಾರು ಸಂಗತಿಗಳು ನಮ್ಮ ಭವ್ಯ ಭಾರತದ ಅಡಿಪಾಯವನ್ನೇ ಅಲುಗಾಡಿಸುವ ಹಂತವನ್ನು ತಲುಪಿದೆ.ಹಿಂಸಾಚಾರ ಬುಗಿಲೆದ್ದು ನಾಡಿನ ಶಾಂತಿಯು ಹಿಂಸಾಚಾರದ ಬಂಡವಾಳವಾಗಿ ರೂಪಾಂತರಗೊಂಡು ಅನ್ಯಾಯ ನಾಯಿ ಕೊಡೆಯಂತೆ ಎದ್ದು ನಿಂತಿದೆ.
ನಾಡಿನಲ್ಲಿ ಶಾಂತಿ ನೆಲೆಸಬೇಕಾದರೆ ಮೊದಲು ಹಿಂಸಾಚಾರ, ಕೋಮುಗಲಭೆ, ಅಪಪ್ರಚಾರ, ದೌರ್ಜನ್ಯ, ಜಾತಿ ಘರ್ಷಣೆ, ವರ್ಣಬೇಧವೆಲ್ಲವೂ ದೇಶದಿಂದ ನಿರ್ಮೂಲನೆಯಾಗಬೇಕು, ಆದರೆ ಪ್ರಸ್ತುತ ಕಾಲದಲ್ಲಿ ಅದು ಸಾಧಿಸುವುದು ಕಷ್ಟ ಸಾಧ್ಯವೆಂಬ ಸಂದೇಹ ಮೂಡುತ್ತಿದೆ. ದೇಶದಲ್ಲಿ ನೈತಿಕ ಮೌಲ್ಯ ಮಾಯವಾಗತೊಡಗಿದೆ. ಅನೀತಿ, ತಾರತಮ್ಯ, ಅನಾಚಾರವೇ ತುಂಬಿ ತುಳುಕುತ್ತಿರುವಾಗ ನ್ಯಾಯಕ್ಕೆ ಬೆಲೆಯೇ ಇಲ್ಲವೆಂಬಂತಾಗಿದೆ.
ಯುವಜನತೆಯೇ ನಾಡಿನ ಯಶಸ್ವಿ
ಯುವಜನತೆಯೇ ನಮ್ಮ ರಾಷ್ಟ್ರದ ಮಾದರಿಗಳು ಯುವ ಜನರು ಉನ್ನತಿಗೇರಿದರೆ ದೇಶದ ಅಭಿವೃದ್ಧಿ ಮಿಂಚಿನಂತಾಗುತ್ತದೆ. ಆದರೆ ಅದಕ್ಕೆ ಅವಕಾಶವಿಲ್ಲವೆಂಬಂತೆ, ಯುವಜನತೆಯ ಎಡೆಯಲ್ಲಿ ಹಿಂಸಾಚಾರದ ಕಿಚ್ಚು ಹೊತ್ತಿಸಲ್ಪಡುತ್ತಿದೆ. ಈ ಕಿಚ್ಚು ಹೊತ್ತಿ ಉರಿದು ಎಲ್ಲಾ ಕಡೆಯಲ್ಲೂ ಆಡಳಿತ ನಡೆಸುವವರ ವೈಫಲ್ಯ ಗೋಚರಿಸುತ್ತದೆ. “ಆರೋಗ್ಯ ಹರಡದು” ಎಂಬಂತೆ ಹಿಂಸಾಚಾರವೆಂಬ ರೋಗವು ಅತಿವೇಗದಲ್ಲಿ ಪಸರಿಸುತ್ತಿದೆ. ಇದಕ್ಕೆ ಬಲಿಯಾಗುತ್ತಿರುವವರು ಯುವಜನತೆಯೇ. ಇದರಿಂದ ಅಮಾಯಕರ ಬಾಳು ಇಂದು ಬೀದಿಪಾಲಾಗಿದೆ.
ದೇಶದ ಸ್ಥಿತಿಗತಿ ಬದಲಾಗ ಬೇಕಾದರೆ ಮೊದಲು ವಿಧ್ಯಾವಂತರು ದೇಶದ ಆಡಳಿತದ ಹಿಡಿತವನ್ನು
ಪಡೆಯಬೇಕು, ವಿದ್ಯಾವಂತರು ಮುಂದೆ ಬಂದರೆ ದೇಶದ ಅಭಿವೃದ್ಧಿ ತನ್ನಷ್ಟಕ್ಕೆ ಅಭಿವೃದ್ಧಿಯತ್ತ ಸಾಗುತ್ತದೆ. ವಿಧ್ಯಾವಂತರು ಎಂಬುವುದು ದೇಶದ ಅಮೂಲ್ಯ ಸಂಪತ್ತು. ಇಂದಿನ ಮಕ್ಕಳಿಂದಲೇ ಈ ದೇಶದಿಂದ ಹಿಂಸೆಯನ್ನು ತೊಲಗಿಸುವ ಕಾರ್ಯತಂತ್ರ ರೂಪಿಸಬೇಕು. ಹಿಂಸೆಗಳು ಹೀಗೆ ಹೆಚ್ಚುತ್ತಾ ಹೋದರೆ ನಮ್ಮ ದೇಶದ ಸ್ಥಿತಿಗತಿಗಳು ಯುದ್ಧ ರಣರಂಗದಂತಾಗಬಹುದು.
ತಾಳ್ಮೆಯೇ ಮೊದಲ ಮದ್ದು
ಹಿಂಸೆಗಳು ಹೆಚ್ಚುತ್ತಾ ಹೋದರೆ ಅದರಿಂದ ದೇಶದಲ್ಲಿ ಹಲವು ಸಮಸ್ಯೆಗಳು, ಗಲಭೆಗಳು ಹೆಚ್ಚುತ್ತದೆ.ಅಮಾಯಕರು ಬಲಿಯಾಗಬೇಕಾಗುತ್ತದೆ. ಇದರಿಂದ ದೇಶದ ಸರ್ವ ಭೌಮತೆಗೆ ಧಕ್ಕೆ ಉಂಟಾಗುತ್ತದೆ. ದೇಶದ ಸ್ಥಿತಿಗತಿ ಪೂರ್ತಿಯಾಗಿ ಬದಲಾವಣೆಯಾಗುತ್ತದೆ. ಎಲ್ಲಿ ನೋಡಿದರೂ ಕಚ್ಚಾಟವನ್ನೇ ಕಾಣಬಹುದು. ಆರ್ಥಿಕ ಸ್ಥಿತಿಗತಿ ಶೂನ್ಯವಾಗತೊಡಗುತ್ತದೆ. ವಿಧ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಅಳಿದು ಹಿಂಸೆ, ಅನಾಚಾರವೇ ಪ್ರಧಾನ ಗುರಿಯಾಗಿ ಮಾರ್ಪಡುತ್ತದೆ.
ಭಾರತವು ಸ್ವಾತಂತ್ರಗೊಂಡ ಬಳಿಕ ತನ್ನದೇ ಆದ ಅಸ್ತಿತ್ವ ಹಾಗೂ ಸರ್ವ ಭೌಮತೆಯನ್ನು ಕಾಪಾಡಿಕೊಂಡು ಬಂದಿದೆ. ಹಿಂಸೆಯನ್ನು ತಡೆಯಬೇಕಾದರೆ ಅದರ ಮೊದಲ ಮದ್ದೇ ತಾಳ್ಮೆ. ತಾಳ್ಮೆಯಿಂದ ಪ್ರತಿರೋಧಿಸುವ ಸಂಪ್ರದಾಯ ಹೊಸತೇನಲ್ಲ, ಅದಕ್ಕೆ ಪ್ರತ್ಯೇಕ ಸಂಪ್ರದಾಯವಿದೆ. ಪ್ರವಾದಿ ಪೈಗಂಬರ್ (ಸ.ಅ) ಕಾಲದಲ್ಲೇ ಅದಕ್ಕೆ ಪ್ರಾಶಸ್ತ್ಯವಿತ್ತು. ಚರಿತ್ರೆ ಪುಟಗಳಲ್ಲಿ ತಾಳ್ಮೆಯಿಂದ ವರ್ತಿಸಿದ ಹಲವು ಸಂಗತಿಗಳು ಇಂದಿಗೂ ಕಾಣಸಿಗುತ್ತದೆ.
ಮತೀಯತೆಯನ್ನು ನಿಗ್ರಹಿಸಲು ಸಹಿಷ್ಣುತೆ, ಅಹಿಂಸೆ, ಐಕ್ಯತೆ, ತಾಳ್ಮೆ ಹಾಗೂ ಪರಸ್ಪರ ಹೊಂದಾಣಿಕೆಯೊಂದಿಗೆ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಎಂಬ ಆಯುಧದೊಂದಿಗೆ ಹಿಂಸೆ ಎಂಬ ಪಿಡುಗನ್ನು ಒಗ್ಗಟ್ಟಿನಿಂದ ಹಿಮ್ಮೆಟ್ಟಿಸಿ ಭವ್ಯ ಭಾರತವನ್ನು ಬಲಿಷ್ಠಗೊಳಿಸೋಣ..
— Author —